ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ಆಪರೇಷನ್ ಆಲ್ ಔಟ್' ಆಗಸ್ಟ್‌ನಲ್ಲಿ 18 ಭಯೋತ್ಪಾದಕರು ಹತ, 108 ಸ್ಥಳೀಯ ಮಟ್ಟದ ಕಾರ್ಯಕರ್ತರ ಬಂಧನ

ಆಪರೇಷನ್‍ ಆಲ್‍ ಔಟ್‍ ಕಾರ್ಯಾಚರಣೆಯಡಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದಾಗಿನಿಂದ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಗಳ ಹಿರಿಯ ಕಮಾಂಡರ್‍ ಗಳು ಸೇರಿದಂತೆ ಅನೇಕ ಉಗ್ರರನ್ನು ನಿರ್ನಾಮ ಮಾಡಿವೆ.

ಭಾರತೀಯ ಸೇನೆ
Vishwanath S
Updated On : 13 Sept 2020, 6:56 pm

ಜಮ್ಮು: ‘ಆಪರೇಷನ್‍ ಆಲ್‍ ಔಟ್‍’ ಕಾರ್ಯಾಚರಣೆಯಡಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದಾಗಿನಿಂದ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಗಳ ಹಿರಿಯ ಕಮಾಂಡರ್‍ ಗಳು ಸೇರಿದಂತೆ ಅನೇಕ ಉಗ್ರರನ್ನು ನಿರ್ನಾಮ ಮಾಡಿವೆ.

‘ಆಪರೇಷನ್‍ ಆಲ್‍ ಔಟ್‍’ ಭಾಗವಾಗಿ, ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡಗಳು ಆಗಸ್ಟ್ ತಿಂಗಳಲ್ಲಿ  ಕೇಂದ್ರಾಡಳಿತ ಪ್ರದೇಶದ ಕೆಲ ಭಾಗಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳ 18 ಉಗ್ರರನ್ನು ಹತ್ಯೆ ಮಾಡಿವೆ.

ಆಪರೇಷನ್‍ ಆಲ್‍ ಔಟ್‍’ನ ಭಾಗವಾಗಿ ಮಹತ್ವದ ಹೋರಾಟ ಮತ್ತು ಶೋಧ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ವಿಶೇಷವಾಗಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಪ್ರಮುಖ ಯಶಸ್ಸನ್ನು ಸಾಧಿಸಿದ್ದೇವೆ ಎಂದು ರಕ್ಷಣಾ ಮೂಲಗಳು ಯುಎನ್‌ಐಗೆ ತಿಳಿಸಿವೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement