ಸುರಂಗಗಳ ಮೂಲಕ ಭಾರತಕ್ಕೆ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ನುಗ್ಗಿಸುತ್ತಿದೆ ಪಾಕಿಸ್ತಾನ! 
ದೇಶ

ಸುರಂಗಗಳ ಮೂಲಕ ಭಾರತಕ್ಕೆ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ನುಗ್ಗಿಸುತ್ತಿದೆ ಪಾಕಿಸ್ತಾನ! 

ಸುರಂಗಗಳ ಮೂಲಕ ಪಾಕಿಸ್ತಾನ ಭಾರತಕ್ಕೆ ಭಯೋತ್ಪಾದಕರನ್ನು ನುಗ್ಗಿಸುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. 

ಶ್ರೀನಗರ: ಸುರಂಗಗಳ ಮೂಲಕ ಪಾಕಿಸ್ತಾನ ಭಾರತಕ್ಕೆ ಭಯೋತ್ಪಾದಕರನ್ನು ನುಗ್ಗಿಸುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. 

ಗಡಿ ಭಾಗದಲ್ಲಿ ಸುರಂಗ ಕೊರೆದು, ಅಲ್ಲಿಂದ ಭಯೋತ್ಪಾದಕರನ್ನು ಒಳಕ್ಕೆ ನುಗ್ಗಿಸಿ ಡ್ರೋಣ್ ಗಳ ಮೂಲಕ ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲಾಗುತ್ತಿದೆ ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಆದಾಗ್ಯೂ ನುಸುಳುವಿಕೆಯನ್ನು ತಡೆಗಟ್ಟುವ ಗ್ರಿಡ್ ಸಕ್ರಿಯವಾಗಿದ್ದು, ಪಾಕಿಸ್ತಾನದ ದುಷ್ಕೃತ್ಯವನ್ನು ತಡೆಗಟ್ಟಲು ಅಗತ್ಯವಿರುವ ಸುರಂಗ ಕೊರೆಯುವುದನ್ನು ತಡೆಯುವ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಅಂತಾರಾಷ್ಟ್ರೀಯ ಗಡಿಯ ಕೆಳಗೆ ಸುರಂಗ ಕೊರೆಯುವುದು ಭಯೋತ್ಪಾದಕರನ್ನು ಒಳಗೆ ನುಗ್ಗಿಸಲು ಪಾಕಿಸ್ತಾನದ ದುಷ್ಕೃತ್ಯದ ಯೋಜನೆಯಾಗಿದೆ, ಇತ್ತೀಚೆಗಷ್ಟೇ 170 ಮೀಟರ್ ಟನ್ ನ್ನು ಗಲರ್ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಗಡಿಯಾದ್ಯಂತ ಕಂಡುಬಂದಿದೆ. 20-25 ಅಡಿ ಆಳದ ಸುರಂಗ ಪಾಕಿಸ್ತಾನದಿಂದ ಬಂದಿರುವುದು ಕಂಡುಬಂದಿದೆ. 

2013-14 ರಲ್ಲಿ ಚನ್ಯಾರಿಯಲ್ಲಿ ಇದೇ ಮಾದರಿಯ ಟನಲ್ ಕಂಡುಬಂದಿತ್ತು. ಈಗ ನಾಗ್ರೋಟಾ ಎನ್ ಕೌಂಟರ್ ನಂತರ ನಿರ್ದಿಷ್ಟ ಒಳನುಸುಳುವಿಕೆ ಟನಲ್ ಮೂಲಕ ನಡೆದಿದೆ ಎಂದು ತಿಳಿದುಬಂದಿದೆ. ಉಳಿದ ಟನಲ್ ಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಡಿಜಿಪಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT