ದೇಶ

ಕೋವಿಡ್ ನಡುವೆ ವರ್ಷದ ಮಟ್ಟಿಗೆ ಸಂಸದರ ಶೇ.30 ರಷ್ಟು ಸಂಬಳ ಕಡಿತ ಸಾಧ್ಯತೆ

Nagaraja AB

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವರ್ಷದ ಮಟ್ಟಿಗೆ ಸಂಸದರ ಸಂಬಳವನ್ನು ಶೇ.30 ರಷ್ಟು ಕಡಿತಗೊಳಿಸುವ ಮಸೂದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಲೋಕಸಭೆಯಲ್ಲಿಂದು ಮಂಡಿಸಿದರು.

ಸಂಸತ್ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ ಸುಗ್ರೀವಾಜ್ಞೆ 2020ರಂತೆ ಸಂಸತ್ ಸದಸ್ಯರ ಭತ್ಯೆ, ಪಿಂಚಣಿ ತಿದ್ದುಪಡಿ ಮಸೂದೆಗೆ ತಿದ್ದುಪಡಿ ತರಲಾಗುತ್ತಿದೆ.

1954ರ ಸಂಸತ್ ಸದಸ್ಯರ ಸಂಬಳ, ವೇತನ ಮತ್ತು ಪಿಂಚಣಿ ಕಾಯ್ದೆಗೆ ತಿದ್ದುಪಡಿ ತರಲು ಈ ಮಸೂದೆಯನ್ನು ಮಂಡಿಸಲಾಗಿದೆ ಎಂದು ಪ್ರಹ್ಲಾದ್ ಜೋಷಿ ತಿಳಿಸಿದರು.ಏಪ್ರಿಲ್ 6 ರಂದು ಸಂಪುಟದಿಂದ ಅನುಮೋದನೆಗೊಂಡ ಸುಗ್ರೀವಾಜ್ಞೆಗೆ  ಏಪ್ರಿಲ್ 7 ರಂದು ರಾಷ್ಟ್ರಪತಿ ಅಂಕಿತ ಹಾಕಿದ್ದರು.

SCROLL FOR NEXT