ದೇಶ

ಪ್ರಧಾನಿ ಮೋದಿ ಜನ್ಮದಿನ: ಸೇವಾ ಸಪ್ತಾಹಕ್ಕೆ ಜೆ.ಪಿ.ನಡ್ಡಾ ಚಾಲನೆ

Manjula VN

ನೊಯ್ಡಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೋಮವಾರ ’ಸೇವಾ ಸಪ್ತಾಹ‌‌’ ಎಂಬ ಅಭಿಯಾನಕ್ಕೆ ಇಲ್ಲಿ ಚಾಲನೆ ನೀಡಿದರು.

ದೆಹಲಿ ಸಮೀಪದ ಗೌತಮ್‌ಬುದ್ಧ ನಗರ ಜಿಲ್ಲೆಯ ಪಶ್ಚಿಮ ಉತ್ತರ ಪ್ರದೇಶಕ್ಕೆ ಸೇರಿದ ಛಾ‍ಪುರಲಿ ಹಳ್ಳಿಯಲ್ಲಿ ಈ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. 

ಸೇವಾ ಸಪ್ತಾಹಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ನಡ್ಡಾ ಅವರು, ’ಸೆಪ್ಟಂಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ 70 ವರ್ಷಗಳು ತುಂಬುತ್ತವೆ. ಅವರು ತಮ್ಮ ಜೀವನವನ್ನು ದೇಶದ ಜನರ ಸೇವೆಗಾಗಿ ಮೀಸಲಿಟ್ಟಿದ್ದಾರೆ. ಹೀಗಾಗಿ ಬಿಜೆಪಿ, ಸೆಪ್ಟೆಂಬರ್ 14 ರಿಂದ 20ರವರೆಗೆ ’ಸೇವಾ ಸಪ್ತಾಹ‌’ ಅಭಿಯಾನವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ. 

ಈ ಸಪ್ತಾಹದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಹಲವು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಜತೆಗೆ ವಿವಿಧ ಸಾಮಾಜಿಕ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಇದೇ ವೇಳೆ ತಿಳಿಸಿದ್ದಾರೆ. 

SCROLL FOR NEXT