ದೇಶ

ಕೊರೋನಾ: ದೇಶದಲ್ಲಿಂದು ಗುಣಮುಖರಾದವರ ಸಂಖ್ಯೆ ಹೆಚ್ಚು: ಚೇತರಿಕೆ ಪ್ರಮಾಣದಲ್ಲಿ ಅಮೆರಿಕಾ ಹಿಂದಿಕ್ಕಿದ ಭಾರತ

Manjula VN

ನವದೆಹಲಿ: ನಾಗಾಲೋಟದಿಂದ ಸಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆಯಲ್ಲಿ ಶನಿವಾರ ಕೊಂಚ ಇಳಿಕೆ ಆಗಿದೆ. ಅಲ್ಲದೇ ಸೋಂಕಿತರ ಸಂಖ್ಯೆಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಳಗೊಂಡಿದೆ.

ಶನಿವಾರ ಒಂದೇ ದಿನ ಬರೋಬ್ಬರಿ 95,880 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಭಾರತದಲ್ಲೀಗ ಚೇತರಿಕೆ ಪ್ರಮಾಣ ಶೇ.79.28ಕ್ಕೆ ತಲುಪಿದೆ. ಇದರೊಂದಿಗೆ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿರುವ ಅಮೆರಿಕಾವನ್ನು ಭಾರತ ಹಿಂದಿಕ್ಕಿದೆ. ಇದೀಗ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿರುವ ವಿಶ್ವದ ನಂ.1 ರಾಷ್ಟ್ರವಾಗಿ ಹೊರಹೊಮ್ಮಿದೆ. 

ಅಮೆರಿಕಾದಲ್ಲಿ ಒಟ್ಟು 6,925,941 ಮಂದಿ ಸೋಂಕಿತರಿದ್ದು, 4,191,894 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ 53,08,015 ಮಂದಿ ಸೋಂಕಿತರಿದ್ದು, ಈ ವರೆಗೂ 42,08,432 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವೈರಸ್ ಪತ್ತೆಗಾಗಿ ಸರ್ಕಾರ ಕೈಗೊಂಡ ಸಮಯೋಚಿತ ಕ್ರಮಗಳು ಈ ಜಾಗತಿಕ ಸಾಧನೆಗೆ ಕಾರಣವಾಗಿವೆ ಎಂದು ಹೇಳಿದೆ. 

SCROLL FOR NEXT