ದೇಶ

ಇಂದು ನಡೆದಿದ್ದು ಅತ್ಯಂತ ನೋವುಂಟುಮಾಡಿದೆ: ರಾಜ್ಯಸಭೆ ಸಭಾಧ್ಯಕ್ಷರ ಮೈಕ್ ಕಿತ್ತೆಸೆದ ಘಟನೆ ಬಗ್ಗೆ ರಾಜನಾಥ್ ಸಿಂಗ್ 

Srinivas Rao BV

ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಮಸೂದೆ ಮಂಡನೆ, ಅಂಗೀಕಾರದ ಸಂದರ್ಭದಲ್ಲಿ ಪ್ರತಿಪಕ್ಷಗಳು ನಡೆದುಕೊಂಡ ರೀತಿಯ ಬಗ್ಗೆ ಕೇಂದ್ರ ರಕ್ಷಣಾ ಸಚಿವ ತೀವ್ರ ಅಸಮಾಧಾನ, ಬೇಸರ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಇಂದು ರಾಜ್ಯಸಭೆ ಕಲಾಪದಲ್ಲಿ ನಡೆದಿದ್ದು ಅತ್ಯಂತ ದುರದೃಷ್ಟಕರ, ಅವಮಾನಕರ ಸಂಗತಿ, ಚರ್ಚೆಗೆ ಅವಕಾಶ ನೀಡುವುದು ಆಡಳಿತ ಪಕ್ಷದವರ ಕರ್ತವ್ಯ ಅದೇ ರೀತಿ, ಸಭಾ ಸಭ್ಯತೆಯನ್ನು ಕಾಪಾಡುವುದು ಪ್ರತಿಪಕ್ಷಗಳ ಜವಾಬ್ದಾರಿಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ರಾಜ್ಯಸಭೆ ಇತಿಹಾಸದಲ್ಲಿಯೇ ಎಂದಿಗೂ ಇಂತಹ ಘಟನೆ ನಡೆದಿರಲಿಲ್ಲ ಎಂದು ಮಸೂದೆ ವಿರೋಧಿಸುವ ಭರದಲ್ಲಿ ಪ್ರತಿಪಕ್ಷಗಳು ರಾಜ್ಯಸಭೆ ಸಭಾಧ್ಯಕ್ಷರ ಮೈಕ್ ಕಿತ್ತೆಸೆದು ರೂಲ್ ಬುಕ್     ನ್ನು ಹರಿದು ಎಸೆದ ಘಟನೆ ಬಗ್ಗೆ ರಾಜನಾಥ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷಿ ಮಸೂದೆ ಸಂಬಧ ಸುಳ್ಳನ್ನು ಪ್ರಚಾರ ಮಾಡಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ನಾನೂ ಸಹ ಓರ್ವ ರೈತ, ಕನಿಷ್ಟ ಬೆಂಬಲ ಬೆಲೆ ಇರಲಿದೆ ಎಂದು ನಾನು ಭರವಸೆ ನೀಡಿದ್ದಾರೆ.

SCROLL FOR NEXT