ದೇಶ

ಚೀನಾಗೆ ಹಿನ್ನಡೆ: ಎಲ್ಎಸಿಯಲ್ಲಿ ಮತ್ತೆ 6 ಶಿಖರಗಳು ಭಾರತ ಸೇನೆ ವಶಕ್ಕೆ!

Srinivas Rao BV

ಲಡಾಖ್: ಚೀನಾ ಗಡಿಯಲ್ಲಿ ತೆಗೆದಿರುವ ತಗಾದೆಗೆ ಒಂದರ ಮೇಲೆ ಒಂದರಂತೆ ಭಾರತ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ನೀಡುತ್ತಿದೆ. 

ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಇದಕ್ಕೂ ಮುನ್ನ ಲಡಾಖ್ ನ ಎಲ್ಎಸಿಯಾದ್ಯಂತ ಇರುವ ಪ್ರಮುಖ, ಆಯಕಟ್ಟಿನ ದೃಷ್ಟಿಯಿಂದ ಬಹುಮುಖ್ಯವೂ ಆಗಿರುವ 6 ಗುಡ್ಡಗಳನ್ನು ವಶಕ್ಕೆ ಪಡೆದಿರುವ ವರದಿಗಳು ಬಂದಿದೆ. 

ಈಶಾನ್ಯ ಲಡಾಖ್ ನಲ್ಲಿ ಈ 6 ಗುಡ್ಡಗಳನ್ನು ಭಾರತ ವಶಕ್ಕೆ ಪಡೆದಿರುವುದರಿಂದ ಈಗ ಗಡಿಯಲ್ಲಿ ಚೀನಾದ ಪ್ರತಿಯೊಂದು ನಡೆಯ ಮೇಲೂ ಹದ್ದಿನ ಕಣ್ಣಿಡುವುದಕ್ಕೆ ಸಾಧ್ಯವಾಗಲಿದೆ. 

ಇನ್ನು ಚೀನಾದ ಆಕ್ರಮಣಕಾರಿ ಸ್ವಭಾವವನ್ನು ಅರಿತಿರುವ ಭಾರತ ಎಲ್ಎಸಿಯಾದ್ಯಂತ  ಚೀನಾದ ಫೈಟರ್ ಜೆಟ್ ಗಳ ಚಟುವಟಿಕೆಗಳನ್ನು ಗಮನಿಸುವುದಕ್ಕಾಗಿ ಇತ್ತೀಚೆಗಷ್ಟೇ ವಾಯುಪಡೆ ಸೇರಿದ್ದ ರಾಫೆಲ್ ಫೈಟರ್ ಜೆಟ್ ಗಳನ್ನು ಬಳಸಿಕೊಳ್ಳುತ್ತಿದ್ದು, ರಾಫೆಲ್ ಹಾರಾಟ ಮುಂದುವರೆದಿದೆ. ಈ ಬಾರಿಯ ಕಾರ್ಪ್ಸ್ ಕಮಾಂಡರ್ ಸಭೆಯಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಭಾಗಿಯಾಗುವ ನಿರೀಕ್ಷೆ ಇದೆ. ಗಡಿಯಲ್ಲಿ ಚೀನಾ ಕ್ಯಾತೆ ತೆಗೆದ ಬಳಿಕ ಈ ವರೆಗೂ ಈ ರೀತಿಯ ಕನಿಷ್ಟ 5 ಸಭೆಗಳು ನಡೆದಿವೆ. 

SCROLL FOR NEXT