ದೇಶ

ಶಹೀನ್ ಬಾಗ್ ಪ್ರತಿಭಟನೆ: ಪ್ರತಿಭಟಿಸುವ ಹಕ್ಕಿನ ಬಗ್ಗೆ ಮಾರ್ಗಸೂಚಿ ಕೋರಿಕೆ; ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Raghavendra Adiga

ನವದೆಹಲಿ: ಶಹೀನ್ ಬಾಗ್ ಪ್ರತಿಭಟನೆ ಹಿನ್ನೆಲೆ  ಪ್ರತಿಭಟನೆಯ ಹಕ್ಕಿನ ಬಗ್ಗೆ ಮಾರ್ಗಸೂಚಿಗಳು ಮತ್ತು ಇತರ ನಿರ್ದೇಶನಗಳನ್ನು ಕೋರಿ ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಸೋಮವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ತನ್ನ ಆದೇಶವನ್ನು ಕಾಯ್ದಿರಿಸಿದೆ.

"ಪ್ರತಿಭಟಿಸುವ ಹಕ್ಕು ಸಂಪೂರ್ಣವಲ್ಲ, ಆದರೆ ಹಕ್ಕಿದೆ "ಎಂದು ನ್ಯಾಯಪೀಠ ಹೇಳಿದೆ, ಪ್ರತಿಭಟನೆಗಳನ್ನು ಶಾಂತಿಯುತವಾಗಿ ಮಾಡಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.

ಇತರೆ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಹೆಚ್ಚಿನ ದಟ್ಟಣೆ ಇರುವ ರಸ್ತೆಯನ್ನು ತಡೆದಿದ್ದ ಪ್ರತಿಭಟನಾಕಾರರ ವಿರುದ್ಧ ಅರ್ಜಿದಾರರಾದ ವಕೀಲ ಅಮಿತ್ ಸಾಹ್ನಿ ಮತ್ತು ಶಶಾಂಕ್ ದಿಯೋ ಸುಧಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. "ಭವಿಷ್ಯದಲ್ಲಿ, ಅವರ ಆಯ್ಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಪ್ರತಿಭಟನೆ ಮುಂದುವರಿಯಬಾರದು.  ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಬಹುದು. ಈ ವಿಷಯವನ್ನು ತೀರ್ಮಾನಿಸಲು ಸುಪ್ರೀಂ ಕೋರ್ಟ್‌ಗೆ ವಿನಂತಿಸುತ್ತೇನೆ ಮತ್ತು ಈ ಕುರಿತು ವಿಸ್ಕೃತ ಆದೇಶವನ್ನು  ನೀಡಬೇಕು" ಸಾಹ್ನಿ ಅರ್ಜಿಯಲ್ಲಿ ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಹಿರಿಯ ಕಾನೂನು ಅಧಿಕಾರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಹಿಂದೆ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ ಎಂದು ಹೇಳಿದ್ದರು.

SCROLL FOR NEXT