ರಾಫೆಲ್ ಯುದ್ಧ ವಿಮಾನ 
ದೇಶ

ರಫೆಲ್ ಬಂದರೂ ದೇಶಕ್ಕೆ ಇನ್ನೂ ಬಂದಿಲ್ಲ ಯುದ್ಧ ವಿಮಾನದ ತಂತ್ರಜ್ಞಾನ: ಸಿಎಜಿ ಆಕ್ಷೇಪ

ಭಾರತಕ್ಕೆ ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಿರುವ ಡಸ್ಸಾಲ್ಟ್ ಏವಿಯೇಷನ್ ಯುದ್ಧ ವಿಮಾನದ ತಂತ್ರಜ್ಞಾನ ರವಾನಿಸುವಲ್ಲಿ ತೋರುತ್ತಿರುವ ವಿಳಂಬದ ಕುರಿತಂತೆ ಸಿಎಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನವದೆಹಲಿ: ಭಾರತಕ್ಕೆ ರಫೆಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಿರುವ ಡಸ್ಸಾಲ್ಟ್ ಏವಿಯೇಷನ್ ಯುದ್ಧ ವಿಮಾನದ ತಂತ್ರಜ್ಞಾನ ರವಾನಿಸುವಲ್ಲಿ ತೋರುತ್ತಿರುವ ವಿಳಂಬದ ಕುರಿತಂತೆ ಸಿಎಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಹೌದು...ಭಾರತಕ್ಕೆ 59 ಸಾವಿರ ಕೋಟಿ ರೂಪಾಯಿ ವೆಚ್ಚದ ಒಪ್ಪಂದದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವ ಒಪ್ಪಂದದಲ್ಲಿ ಪ್ರಮುಖ ಕಂಪನಿಗಳಾದ ಡಸಾಲ್ಟ್ ಏವಿಯೇಶನ್ ಮತ್ತು ಎಂಬಿಡಿಎ, ಭಾರತಕ್ಕೆ ಉನ್ನತ ತಂತ್ರಜ್ಞಾನವನ್ನು ಪೂರೈಸುವ ಬದ್ಧತೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

ಭಾರತ ಮತ್ತು ಫ್ರಾನ್ಸ್ ನಡುವಿನ ಈ ಒಪ್ಪಂದದ ಅನ್ವಯ ಫ್ರಾನ್ಸ್‌ನ ಉಭಯ ಕಂಪನಿಗಳು ಒಟ್ಟು ಗುತ್ತಿಗೆ ಮೌಲ್ಯದ ಶೇ.50ರಷ್ಟನ್ನು ಭಾರತದ ಆಫ್ ಸೆಟ್ ಕಂಪನಿಗಳಲ್ಲಿ ಮರುಹೂಡಿಕೆ ಮಾಡಬೇಕು. ಇದೇ ವಿಚಾರವಾಗಿ ಬುಧವಾರ "ಮ್ಯಾನೇಜ್ಮೆಂಟ್ ಆಫ್ ಡಿಫೆನ್ಸ್ ಆಫ್‌ಸೆಟ್ಸ್" ಎಂಬ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ವರದಿಯಲ್ಲಿ ಸಿಎಜಿ  ಈ ಮಾಹಿತಿ ನೀಡಿದೆ. 2015ರ ಸೆಪ್ಟೆಂಬರ್‌ನಲ್ಲಿ ಉಭಯ ಕಂಪನಿಗಳು ನೀಡಿದ್ದ ಆರಂಭಿಕ ಭರವಸೆಯಂತೆ, ಡಿಆರ್‌ಡಿಓಗೆ "ಅತ್ಯುನ್ನತ ತಂತ್ರಜ್ಞಾನ" ಪೂರೈಸುವ ಮೂಲಕ ಆಫ್ ಸೆಟ್ ಬದ್ಧತೆಯ ಶೇ. 30ರಷ್ಟು ಈಡೇರಿಸಬೇಕಿತ್ತು. ಆದರೆ ಇದರಲ್ಲಿ ಈ ಕಂಪನಿಗಳು ವಿಫಲವಾಗಿವೆ. ಭಾರತಕ್ಕೆ ರಫೆಲ್ ಯುದ್ಧ ವಿಮಾನ ಜೊತೆ ತಂತ್ರಜ್ಞಾನದ ವಿನಿಮಯ ಕೂಡ ಆಗಬೇಕಿತ್ತು. ಆದರೆ ಈ ವರೆಗೂ ಅದು ಆಗಿಲ್ಲ ಎಂದು ವಿವರಿಸಿದೆ. 

ಆದರೆ ಈ ಭರವಸೆಗಳನ್ನು ಈಡೇರಿಸಲು ಒಪ್ಪಂದಕ್ಕೆ ಸಹಿ ಮಾಡಿದ ದಿನದಿಂದ ಏಳು ವರ್ಷಗಳ ಕಾಲಾವಕಾಶವಿದ್ದು, ಮೊದಲ ಮೂರು ವರ್ಷಗಳಿಗೆ ಇಂಥಹ ಯಾವುದೇ ಬದ್ಧತೆ ಇರುವುದಿಲ್ಲ ಎಂದೂ ವರದಿ ಸ್ಪಷ್ಟಪಡಿಸಿದ್ದು, ಆದಾಗ್ಯೂ ಒಪ್ಪಂದದ ಅನ್ವಯ ಎಂಬಿಡಿಎಯ ಒಟ್ಟು ಬದ್ಧತೆಯ ಶೇ. 57ರಷ್ಟನ್ನು ಹಾಗೂ ಡಸಾಲ್ಟ್‌ನ ಒಟ್ಟು ಬದ್ಧತೆಯ ಶೇ. 58ನ್ನು ಮಾತ್ರ ಕೊನೆಯ ಅಥವಾ ಏಳನೇ ವರ್ಷದಲ್ಲಿ (2023) ಈಡೇರಿಸಬೇಕಾಗುತ್ತದೆ ಎಂದು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ