ದೇಶ

ಅಜಾಂಖಾನ್ ಪುತ್ರ ಅಬ್ದುಲ್ಲಾ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಸಾಧ್ಯತೆ

Nagaraja AB

ಲಖನೌ: ಸಮಾಜವಾದಿ ಪಕ್ಷದ ಸಂಸದ ಅಜಾಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಾಂ ಚುನಾವಣಾ ಅಫಿಡವಿಟ್ ನಲ್ಲಿ ನಕಲಿ ಜನನ ಪ್ರಮಾಣಪತ್ರವನ್ನು ನೀಡುವ ಮೂಲಕ ತಪ್ಪಾದ ಜನ್ಮ ದಿನಾಂಕವನ್ನು ಉಲ್ಲೇಖಿಸಿದ್ದಕ್ಕಾಗಿ ರಾಜ್ಯ ವಿಧಾನಸಭೆಯಿಂದ ಅನರ್ಹಗೊಂಡಿದ್ದು,  ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವ ಸಾಧ್ಯತೆಯಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ 1951ರ ಜನ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (ಎ) ಅಡಿಯಲ್ಲಿ ತಮ್ಮ ಅಭಿಪ್ರಾಯ ನೀಡುವಂತೆ ಉತ್ತರ ಪ್ರದೇಶ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದುಬೆ,  ರಾಷ್ಟ್ರಪತಿಗಳಿಗೆ ಈ ವಿಷಯವನ್ನು ವರ್ಗಾಯಿಸಿದ್ದಾರೆ.

ಚುನಾವಣಾ ದುಷ್ಕೃತ್ಯ'ಗಳಲ್ಲಿ ಪಾಲ್ಗೊಂಡಿರುವ ಅಬ್ದುಲ್ಲಾ ಅಜಮ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಶಿಫಾರಸು ಮಾಡಿದ ಕಾನೂನು ಇಲಾಖೆಯ ಅಭಿಪ್ರಾಯವನ್ನು ಅನುಸರಿಸಿ ಅವರ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತದ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಂಡ ನಂತರವೇ ರಾಷ್ಟ್ರಪತಿಗಳು ಈ ವಿಷಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಚುನಾವಣಾ ಸಮಿತಿ ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ಕಳುಹಿಸುವ ಮೊದಲು ರಾಜ್ಯ ಕಾನೂನು ಇಲಾಖೆಯ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಅಬ್ದುಲ್ಲಾ ಕನಿಷ್ಠ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಿದ ದೇಶದ ಮೊದಲ ಮುಖಂಡರಾಗುವ ಸಾಧ್ಯತೆ ಇದೆ.

SCROLL FOR NEXT