ದೇಶ

ಗಡಿ ನಿಯಂತ್ರಣ ರೇಖೆ ಬಳಿ ಯಥಾಸ್ಥಿತಿ ಮುಂದುವರಿಕೆ, ಸದ್ಯಕ್ಕೆ ಸಂಘರ್ಷದ ಪರಿಸ್ಥಿತಿಯಿಲ್ಲ: ಸೇನೆಯ ಉನ್ನತ ಮೂಲಗಳು

Sumana Upadhyaya

ನವದೆಹಲಿ: ಗಡಿ ನಿಯಂತ್ರಣ ರೇಖೆಯ ಬಳಿ ಚೀನಾ ಮತ್ತು ಪಾಕಿಸ್ತಾನ ಜೊತೆ ಯುದ್ಧ ನಡೆಸುವ ಸೂಚನೆಯನ್ನು ನೀಡುತ್ತಿಲ್ಲ. ಆದರೆ ಪಾಕಿಸ್ತಾನ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಲೇ ಇರುತ್ತದೆ ಎಂದು ಸೇನಾ ಮೂಲಗಳು ಹೇಳುತ್ತವೆ.

ಪಾಕಿಸ್ತಾನ ಗಡಿ ಭಾಗದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾಪಡೆಯ ಸಂಖ್ಯೆ ನಿಯೋಜನೆ ಅಥವಾ ನಿಲುಗಡೆ ವಿಧಾನದಲ್ಲಿ ತಳಮಟ್ಟದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಸದ್ಯ ಭಾರತೀಯ ಸೇನೆಯ ಗಮನ ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯ ಮೇಲಿದ್ದರೂ ಕೂಡ ಚೀನಾದ ಜೊತೆಗಿನ ಸಂಘರ್ಷ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕೂಡ ಸೇನೆ ನಿಯೋಜನೆಯನ್ನು ಹೆಚ್ಚಿಸಲಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಒಂದು ತಿಂಗಳಲ್ಲಿ ಚಳಿಗಾಲ ಬರುವುದರಿಂದ ಗಡಿಯ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದನೆ, ಉಗ್ರರ ಒಳ ನುಸುಳುವಿಕೆಗೆ ಪಾಕಿಸ್ತಾನ ತೀವ್ರ ಪ್ರೋತ್ಸಾಹ ನೀಡುವ ಸಾಧ್ಯತೆಯಿರುವುದರಿಂದ ಸೇನೆಗೆ ಎಚ್ಚರಿಕೆಯಿಂದಿರುವಂತೆ ಹೇಳಲಾಗಿದೆ. ಗಡಿಭಾಗದಲ್ಲಿ ಗುಪ್ತಚರ, ಕಣ್ಗಾವಲು, ವಿಚಕ್ಷಣ ಸಾಮರ್ಥ್ಯಗಳು ಮತ್ತು ತುರ್ತು ಖರೀದಿಗಳನ್ನು ಹೆಚ್ಚಿಸಲು ಭಾರತೀಯ ಸೇನೆ ಮುಂದಾಗಿದೆ.

ಹೈಯರ್-ಕ್ಯಾಲಿಬರ್ ರೈಫಲ್: ಸೇನೆಯ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಸಾಧನಗಳನ್ನು ಸಂಗ್ರಹಿಸಲು ಹಳೆಯ 5.56 ಎಂಎಂ ಕ್ಯಾಲಿಬರ್ ಇನ್ಸಾಸ್ ರೈಫಲ್ ಗಳ ಬದಲಿಗೆ 7.22 ಎಂಎಂ ಕ್ಯಾಲಿಬರ್ ಸೆಗ್ ಸೌರ್ ರೈಫಲ್ ಗಳನ್ನು ಸಂಗ್ರಹಿಸಲು ಸೇನೆ ಮುಂದಾಗಿದೆ. ಅಧಿಕ ಶಕ್ತಿ ಮತ್ತು ದೂರದವರೆಗೆ ಹೋಗುವ ಸಾಮರ್ಥ್ಯವನ್ನು ಸೆಗ್ ಸೌರ್ ಹೊಂದಿದೆ.

SCROLL FOR NEXT