ದೇಶ

ನೂತನ ಕೃಷಿ ಮಸೂದೆಗಳಿಗೆ ವಿರೋಧ: ಎನ್ ಡಿಎ ಒಕ್ಕೂಟ ತೊರೆದ ಅಕಾಲಿದಳ

Raghavendra Adiga

ನವದೆಹಲಿ:  ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿದ್ದ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿ ತೊರೆದು ಎನ್ಡಿಎ ಒಕ್ಕೂಟದಿಂದ ಹೊರ ಬರಲು ನಿರ್ಧರಿಸಿದೆ.

ಬಿಜೆಪಿ ಸರ್ಕಾರದ ಮೂರು ವಿವಾದಿತ ಮಸೂದೆ ಗೆ ಆಕ್ಷೇಪಿಸಿ ಸೆ.17ರಂದು ಶಿರೋಮಣಿ ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು 

ಎಂಎಸ್ಪಿಯಲ್ಲಿ ರೈತರ ಬೆಳೆಗಳ ಮಾರಾಟವನ್ನು ರಕ್ಷಿಸಲು ಶಾಸನಬದ್ಧ ಶಾಸಕಾಂಗ ಖಾತರಿಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಕೇಂದ್ರದ ಹಠಮಾರಿ ಧೋರಣೆ ಮತ್ತು ಪಂಜಾಬಿ ಮತ್ತು ಸಿಖ್ ಸಮಸ್ಯೆಗಳ ಬಗ್ಗೆ ಅದರ ನಿರಂತರ ನಿರ್ಲಕ್ಷ್ಯದ ಕಾರಣ ನಾವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ತೊರೆದಿದ್ದೇವೆ ಎಂದು ಎಸ್ಎಡಿ ಹೇಳಿದೆ.

ಕೃಷಿ ಮಸೂದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಎನ್‌ಡಿಎಯಿಂದ ಹೊರಬಂದಿದೆ ಎಂದು ಪಕ್ಷದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

ಇದಕ್ಕೂ ಮುನ್ನ ಸುಖ್ಬೀರ್ ಸಿಂಗ್ ಬಾದಲ್ ಅವರು ಪಂಜಾಬ್ ಸರ್ಕಾರವು ತಕ್ಷಣವೇ ಇಡೀ ರಾಜ್ಯವನ್ನು ಕೃಷಿ ಮಾರುಕಟ್ಟೆಯೆಂದು ಘೋಷಿಸಲು ಸುಗ್ರೀವಾಜ್ಞೆಯನ್ನು ತರಬೇಕೆಂದು ಒತ್ತಾಯಿಸಿದ್ದರು. 

SCROLL FOR NEXT