ಅದಾರ್​ ಪೂನವಾಲಾ 
ದೇಶ

ಕೊರೋನಾ ಲಸಿಕೆ ವಿತರಣೆಗಾಗಿ ಕೇಂದ್ರ ಸರ್ಕಾರದ ಬಳಿ 80,000 ಕೋಟಿ ರೂ ಇದೆಯೆ? ಅದಾರ್​ ಪೂನವಾಲಾ ಪ್ರಶ್ನೆ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸಂಭಾವ್ಯ ಕೊರೋನಾವೈರಸ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಮ್​ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್​ ಪೂನವಾಲಾ ಅವರು ಲಸಿಕೆ ಖರೀದಿಸಲು ಮತ್ತು ವಿತರಿಸಲು ಭಾರತ ಸರ್ಕಾರದ ಬಳಿ  80,000 ಕೋಟಿ ರೂ ಇದೆಯೆ ಎಂದು ಪ್ರಶ್ನಿಸಿದ್ದಾರೆ.

ಪುಣೆ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸಂಭಾವ್ಯ ಕೊರೋನಾವೈರಸ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಮ್​ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್​ ಪೂನವಾಲಾ ಅವರು ಲಸಿಕೆ ಖರೀದಿಸಲು ಮತ್ತು ವಿತರಿಸಲು ಭಾರತ ಸರ್ಕಾರದ ಬಳಿ  80,000 ಕೋಟಿ ರೂ ಇದೆಯೆ ಎಂದು ಪ್ರಶ್ನಿಸಿದ್ದಾರೆ.

"ತ್ವರಿತ ಪ್ರಶ್ನೆ; ಮುಂದಿನ ಒಂದು ವರ್ಷದಲ್ಲಿ ಭಾರತ ಸರ್ಕಾರವು 80,000 ಕೋಟಿಗಳನ್ನು ಖರ್ಚು ಮಾಡುತ್ತದೆಯೆ?ಯಾಕೆಂದರೆ ಭಾರತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಸಿಕ್ಕುವಂತಾಗಲು ಇದು ಅಗತ್ಯವಾಗಿದೆ." ಅವರು ಟ್ವೀಟ್ ಮಾಡಿದ್ದಾರೆ, ಅಲ್ಲದೆ ಈ ಟ್ವೀಟ್ ಗೆ ಸಂಬಂಧಿಸಿ ಧಾನ ಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ.

"ನಾನು ಈ ಪ್ರಶ್ನೆಯನ್ನು ಕೇಳುತ್ತೇನೆ ಏಕೆಂದರೆ ಭಾರತ ಮತ್ತು ವಿದೇಶಗಳಲ್ಲಿ ಲಸಿಕೆ ತಯಾರಕರು ನಮ್ಮ ದೇಶದ ಅಗತ್ಯತೆ, ಸಂಗ್ರಹಣೆ ಮತ್ತು ವಿತರಣೆಯ ದೃಷ್ಟಿಯಿಂದ ಪೂರೈಸಲು ಯೋಜನೆ ಮತ್ತು ಮಾರ್ಗದರ್ಶನ ಮಾಡಬೇಕಾಗಿದೆ" ಎಂದು ಪೂನವಾಲಾ ಹೇಳಿದ್ದಾರೆ. 

ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸಂಭಾವ್ಯ ಲಸಿಕೆಯನ್ನು ತಯಾರಿಸಲು ಎಸ್‌ಐಐ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆರ್ಥಿಕತೆಯ ದೇಶಗಳಿಗೆ ಆಕ್ಸ್‌ಫರ್ಡ್ ಲಸಿಕೆ 3 ಡಾಲರ್‌ಗೆ ಲಭ್ಯವಾಗುವಂತೆ ಮಾಡುತ್ತೇವೆಂದು ಎಸ್‌ಐಐ ಈ ಹಿಂದೆ ಘೋಷಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Hockey Asia Cup 2025: ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ವಿರುದ್ಧ ಭಾರತ 4-1 ಗೆಲುವು; 8 ವರ್ಷಗಳ ಬಳಿಕ ಪ್ರಶಸ್ತಿ, ವಿಶ್ವಕಪ್ ಗೆ ಅರ್ಹತೆ!

'ತಂಡದಲ್ಲಿರಲು ಅರ್ಹನಾಗಿರುವಾಗ... ಬೇಸರ': ಕೊನೆಗೂ ಮೌನ ಮುರಿದ Shreyas Iyer

'ಧೈರ್ಯ ತೋರಿಸಿ, ಅಮೆರಿಕದ ಆಮದುಗಳ ಮೇಲೆ ಶೇ. 75 ರಷ್ಟು ಸುಂಕ ವಿಧಿಸಿ': ಪ್ರಧಾನಿ ಮೋದಿಗೆ ಕೇಜ್ರಿವಾಲ್ ಸವಾಲು

Ashoka emblem ಧ್ವಂಸ ಪ್ರಕರಣ: 50 ಮಂದಿ ಪೊಲೀಸ್ ವಶಕ್ಕೆ! ಬುರ್ಖಾಧಾರಿ ಮಹಿಳೆಯರಿಗೂ ಸಂಕಷ್ಟ!

ಬಿಹಾರದ ಮಹಾಮೈತ್ರಿಕೂಟಕ್ಕೆ ಹೊಸ ಪಕ್ಷಗಳ ಸೇರ್ಪಡೆ; ಸೀಟು ಹಂಚಿಕೆ ಮತ್ತಷ್ಟು ಕಠಿಣ!

SCROLL FOR NEXT