ದೇಶ

ಈ ಬಾರಿ ಅಯೋಧ್ಯೆಯಲ್ಲಿ ನಡೆಯುವುದಿಲ್ಲ ರಾಮ್ ಲೀಲಾ, ವರ್ಚ್ಯುಯಲ್ ದೀಪೋತ್ಸವಕ್ಕೆ ತಯಾರಿ

Srinivas Rao BV

ಅಯೋಧ್ಯೆ: ಅಯೋಧ್ಯೆ ಆಡಳಿತ ಈ ಬಾರಿ ಅಯೋಧ್ಯೆಯಲ್ಲಿ ರಾಮ್ ಲೀಲಾ ನಡೆಸುವುದಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ನಿರಾಕರಿಸಿದೆ. 

ಆದರೆ ಈ ಬಾರಿ ದೀಪಾವಳಿ ಆಚರಣೆಗಾಗಿ ವರ್ಚ್ಯುಯಲ್ ದೀಪೋತ್ಸವ ನಡೆಸುವುದಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ. 

ರಾಮ್ ಲೀಲಾ ನಡೆಸುವುದಕ್ಕೆ ಅಯೋಧ್ಯ ಶೋಧ್ ಸಂಸ್ಥಾನ್ ನಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಅಯೋಧ್ಯ ಶೋಧ್ ಸಂಸ್ಥಾನದ ವ್ಯವಸ್ಥಾಪಕರಾದ ರಾಮ್ ತೀರ್ಥ್ ಹೇಳಿದ್ದಾರೆ. 

ರಾಮ್ ಲೀಲಾ ಗೆ ನಿರ್ಬಂಧ ವಿಧಿಸಿರುವುದರಿಂದ 300 ಕ್ಕೂ ಹೆಚ್ಚು ರಾಮ್ ಲೀಲಾ ಕಲಾವಿದರು ಜೀವನೋಪಾಯಕ್ಕಾಗಿ ಕಳೆದ 7 ತಿಂಗಳುಗಳಿಂದ ಕಷ್ಟಪಡುತ್ತಿದ್ದಾರೆ. ಸರ್ಕಾರ ಅವರಿಗೆ ವೇತನ ನೀಡಿಲ್ಲ ಎಂದು ರಾಮ್ ಲೀಲಾ ಕಲಾವಿದರೊಬ್ಬರು ಮಾಹಿತಿ ನೀಡಿದ್ದಾರೆ. 

2017 ರಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದಾಗಿನಿಂದಲೂ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಣೆ ತಂದಿದ್ದರು. ಈ ಬಾರಿ ವರ್ಚ್ಯುಯಲ್ ದೀಪೋತ್ಸವ ನಡೆಯಲಿದೆ. 

SCROLL FOR NEXT