ದೇಶ

ಕೊರೋನಾ ಪಾಸಿಟಿವ್: ಹೃಷಿಕೇಶದ ಏಮ್ಸ್ ಆಸ್ಪತ್ರೆಗೆ ಉಮಾ ಭಾರತಿ ದಾಖಲು, ಸೆ.30ಕ್ಕೆ ಬಾಬ್ರಿ ಮಸೀದಿ ತೀರ್ಪು

Sumana Upadhyaya

ನವದೆಹಲಿ: ಬಿಜೆಪಿ ನಾಯಕಿ ಉಮಾ ಭಾರತಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಉತ್ತರಾಖಂಡದ ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ರಾತ್ರಿ ಅವರಿಗೆ ತೀವ್ರ ಜ್ವರ ಬಂದಿತ್ತು.

ನಿನ್ನೆ ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದ ಅವರು, ಹಿಮಾಲಯದಿಂದ ಬಂದ ನಂತರ ಜ್ವರ ಕಾಣಿಸಿಕೊಂಡು ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ನನ್ನ ಸ್ನೇಹಿತರು, ಬಂಧುಗಳಿಗೆ ನನ್ನ ಆರೋಗ್ಯದ ಬಗ್ಗೆ ತೀವ್ರ ಚಿಂತೆಯಾಗಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

1992 ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನಾಡಿದ್ದು ಬುಧವಾರ ಹೊರಬೀಳಲಿದ್ದು ಏಮ್ಸ್ ಅಧಿಕಾರಿಗಳು ಅನುಮತಿ ಕೊಟ್ಟರೆ ಲಕ್ನೊದ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಹಿಮಾಲಯದ ಸನ್ಯಾಸಿಗಳಿಂದ ತಮಗೆ ಕೊರೋನಾ ಬಂತು ಎಂದು ಕೆಲವರು ಹೇಳುತ್ತಿದ್ದಾರೆ, ಆದರೆ ತಮ್ಮ ಕಾರಿನ ಚಾಲಕನಿಗೆ ಕೊರೋನಾ ಬಂದಿತ್ತು, ಅದು ತಡವಾಗಿ ಪರೀಕ್ಷೆ ಮಾಡಿಸಿಕೊಂಡ ಮೇಲೆ ಗೊತ್ತಾಯಿತು. ಅವರಿಂದ ತಮಗೆ ಕೊರೋನಾ ಬಂದಿರಬೇಕು ಎಂದು ಹೇಳಿದ್ದಾರೆ.

SCROLL FOR NEXT