ದೇಶ

ಕೋವಿಡ್-19 ಚಿಕಿತ್ಸೆಗೆ ಆಯುರ್ವೇದ ಉತ್ತಮವೇ?: ಕ್ಲಿನಿಕಲ್ ಟ್ರಯಲ್ ಗಳಿಂದ ಹೊರಬಿತ್ತು ಅಚ್ಚರಿಯ ಮಾಹಿತಿ

Srinivas Rao BV

ನವದೆಹಲಿ: ಕೊರೋನಾ ಚಿಕಿತ್ಸೆ, ಕ್ಲಿನಿಕಲ್ ಟ್ರಯಲ್ ಗಳಿಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ ಅಚ್ಚರಿಯ ಹಾಗೂ ಬಹುಮುಖ್ಯವಾದ ಸಂಗತಿ ಹೊರಬಿದ್ದಿದೆ. 

ಅಲೋಪತಿ ಔಷಧಗಳಿಗೆ ಹೋಲಿಕೆ ಮಾಡಿದರೆ ಮಾರಕ ಕೊರೋನಾಗೆ ಆಯುರ್ವೇದದ ಚಿಕಿತ್ಸಾ ವಿಧಾನ ಹೆಚ್ಚು ಪರಿಣಾಮಕಾರಿ ಎನ್ನುತ್ತಿದೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿರುವ ಕ್ಲಿನಿಕಲ್ ಟ್ರಯಲ್ ಗಳು. 

ಆಯುರ್ವೇದದ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ರೋಗಿಗಳು ಹಾಗೂ ಅಲೋಪತಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಹೋಲಿಕೆ ಮಾಡಿದರೆ, ನೈಸರ್ಗಿಕ ವಿಧಾನದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಬಹುತೇಕ ರೋಗಲಕ್ಷಣಗಳು ಗುಣಮುಖವಾಗಿವೆ. 

ಕೋರಿವಲ್ ಲೈಫ್ ಸೈನ್ಸಸ್ ನಿಂದ ನೀಡಲಾಗುತ್ತಿರುವ ಇಮ್ಯುನೊಫ್ರೀ ಹಾಗೂ ಬಯೋಜೆಟಿಕಾದ ರೆಜಿನ್‌ಮ್ಯೂನ್ ಎಂಬ ನ್ಯೂಟ್ರಾಸ್ಯುಟಿಕಲ್ ಚಿಕಿತ್ಸಾ ವಿಧಾನಗಳಿವೆ. ಇವು ಈ ಹಿಂದೆ ಸರ್ಕಾರಿ ಅನುಮೋದಿತ ಅಲೋಪತಿ ಚಿಕಿತ್ಸೆ ಪಡೆಯುತ್ತಿದ್ದವರಿಗಿಂತ ಹೆಚ್ಚು ರೋಗಿಗಳನ್ನು ಕೊರೋನಾದ ಬಹುತೇಕ ಗುಣಲಕ್ಷಣಗಳಿಂದ ಗುಣಪಡಿಸುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಿದೆ ಮಧ್ಯಂತರ ಕ್ಲಿನಿಕಲ್ ಟ್ರಯಲ್ ನ ವರದಿ. 
   
ಐಎಎನ್ಎಸ್ ವರದಿ ಪ್ರಕಾರ ಸಿ ರಿಯಾಕ್ಟೀವ್ ಪ್ರೊಟೀನ್,  ಪ್ರೊಕಾಲ್ಸಿಟೋನಿನ್, ಡಿ ಡೈಮರ್ ಹಾಗೂ ಆರ್ ಟಿ-ಪಿಸಿಆರ್ ನಂತಹ ಪರೀಕ್ಷೆಗಳಲ್ಲೂ ಸಹ ಅಲೋಪತಿ ಚಿಕಿತ್ಸೆ ಪಡೆದವರಿಗಿಂತ ಆಯುರ್ವೇದ ಚಿಕಿತ್ಸೆ ಪಡೆಯುತ್ತಿರುವವರು ಶೇ.20-60 ರಷ್ಟು ಉತ್ತಮ ಚೇತರಿಗೆ ಕಾಣುತ್ತಿದ್ದಾರೆ. 

ಆಯುರ್ವೇದದ ಚಿಕಿತ್ಸಾ ವಿಧಾನ ಅನುಸರಿಸುತ್ತಿರುವ ಶೇ.85 ರಷ್ಟು ಕೋವಿಡ್-19 ರೋಗಿಗಳು ಕೇವಲ 5 ದಿನಗಳಲ್ಲಿ ಕೊರೋನಾ ನೆಗೆಟೀವ್ ವರದಿ ಪದಿದ್ದರೆ, ಅದೇ 5 ದಿನಗಳಲ್ಲಿ ಅಲೋಪತಿ ಚಿಕಿತ್ಸಾ ವಿಧಾನ ಅನುಸರಿಸುತ್ತಿರುವ ಶೇ.60 ರಷ್ಟು ರೋಗಿಗಳು ನೆಗೆಟೀವ್ ವರದಿ ಪಡೆದಿದ್ದಾರೆ. ಆಯುರ್ವೇದ ಚಿಕಿತ್ಸೆಯಲ್ಲಿ 10 ದಿನಗಳಲ್ಲಿ  ಶೇ.100 ರಷ್ಟು ರೋಗಿಗಳು ಕೊರೋನಾದಿಂದ ಮುಕ್ತರಾಗಿದ್ದಾರೆ ಎಂದು ಮಧ್ಯಂತರ ವರದಿ ತಿಳಿಸಿದೆ. 
 
ದೇಶಾದ್ಯಂತ 3 ಆಸ್ಪತ್ರೆಗಳಲ್ಲಿ ಇಮ್ಯುನೊಫ್ರೀ ಮತ್ತು ರೆಜಿನ್‌ಮ್ಯೂನ್ ನ್ನು  ಔಷಧೀಯ ನಿಯಂತ್ರಿತ ಮಲ್ಟಿಸೆಂಟರ್ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಿಟಿಆರ್ ಐ ನಿಂದ ಅನುಮೋದಿನೆ ಪಡೆದಿರುವ ಈ ಕ್ಲಿನಿಕಲ್ ಟ್ರಯಲ್ ಗಳು ಸರ್ಕಾರಿ ಆಸ್ಪತ್ರೆಗಳಾದ ಆಂಧ್ರಪ್ರದೇಶದ ಶ್ರೀಕಾಕುಳಂ, ಗುಜರಾತ್ ನ ವಡೋದರದ ಪರ್ಲು ಸೇವಾಶ್ರಮ ಆಸ್ಪತ್ರೆ ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿರುವ ಲೋಕಮಾನ್ಯ ಆಸ್ಪತ್ರೆಗಳಲ್ಲಿ ನಡೆದಿದೆ. 

SCROLL FOR NEXT