ದೇಶ

ಬಿಹಾರ ಚುನಾವಣೆ: ಎನ್ ಡಿಎ ವಿರುದ್ಧ ಹೋರಾಡಲು ಹೊಸ ಮೈತ್ರಿ ರಚಿಸಿದ ಉಪೇಂದ್ರ ಖುಷ್ವಾ, ಮಾಯಾವತಿ

Lingaraj Badiger

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಎನ್ ಡಿಎ ವಿರುದ್ಧ ಹೋರಾಡಲು ಎನ್ ಡಿಎನಿಂದ ಹೊರಬಂದ ಆರ್ ಎಲ್ ಸಿಪಿ ಮುಖ್ಯಸ್ಥ ಉಪೇಂದ್ರ ಖುಷ್ವಾ ಅವರು ಮಂಗಳವಾರ ಹೊಸ ಮೈತ್ರಿ ಘೋಷಣೆ ಮಾಡಿದ್ದು, ಇದರಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ಮತ್ತು ಜನತಾಂತ್ರಿಕ ಪಕ್ಷ(ಸಮಾಜವಾದಿ) ಸೇರಿವೆ.

ಈ ಸಂಬಂಧ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಖುಷ್ವಾ ಅವರು, ರಾಜ್ಯದ ಎಲ್ಲಾ 243 ವಿಧಾನಸಭಾ ಕ್ಷೇತ್ರಗಳಲ್ಲೂ "ಅಬ್ಕಿ ಬಾರ್ ಶಿಕ್ಷಾ ವಾಲಿ ಸರ್ಕಾರ್ (ಈ ಬಾರಿ ಶಿಕ್ಷಣಕ್ಕಾಗಿ ಸರ್ಕಾರ)" ವಾಗ್ದಾನದೊಂದಿಗೆ ಸ್ಪರ್ಧಿಸಲಾಗುವುದು ಎಂದು ಹೇಳಿದರು.

ಎನ್ ಡಿಎ, ಜಿಎ, ಯುಡಿಎಸ್ಎ(ಒವೈಸಿ) ಮತ್ತು ಪಪ್ಪು ಯಾದವ್ ನೇತೃತ್ವದ ಪಿಡಿಎ ನಂತರ ಬಿಹಾರದಲ್ಲಿ ಖುಷ್ವಾ ಅವರ ಈ ಹೊಸ ಮೈತ್ರಿಕೂಟ ಐದನೇ ರಾಜಕೀಯ ಮೈತ್ರಿಕೂಟವಾಗಿ ಹೊರಹೊಮ್ಮಿದೆ.

ಬಿಜೆಪಿ ಆರ್ ಜೆಡಿ ರಾಜಕೀಯ ನಿರ್ಧಾರಗಳ ಮೇಲೆ ಪರೋಕ್ಷ ಪ್ರಭಾವ ಬೀರುತ್ತಿದ್ದು, ಜೆಡಿಯು ಮತ್ತು ಎಲ್ ಜೆಪಿ ನಡುವೆ ಬಿರುಕು ಮೂಡಿಸುವ ಮೂಲಕ ರಾಜಕೀಯ ಆಟವಾಡುತ್ತಿದೆ ಎಂದು ಖುಷ್ವಾ ಆರೋಪಿಸಿದ್ದಾರೆ.

SCROLL FOR NEXT