ದೇಶ

56 ವಿಧಾನಸಭಾ, 1 ಲೋಕಸಭಾ ಕ್ಷೇತ್ರಗಳಿಗೆ ನವಂಬರ್ 3, 7 ರಂದು ಉಪಚುನಾವಣೆ: ಚುನಾವಣಾ ಆಯೋಗ

Srinivas Rao BV

ನವದೆಹಲಿ: ಕರ್ನಾಟಕ, ತೆಲಂಗಾಣವೂ ಸೇರಿದಂತೆ 11 ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. 

ಬಿಹಾರ ಲೋಕಸಭಾ ಕ್ಷೇತ್ರ ಹಾಗೂ ಮಣಿಪುರದ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನ.7 ಕ್ಕೆ ನಿಗದಿಯಾಗಿದ್ದರೆ. ಉಳಿದ ಉಪಚುನಾವಣೆಗಳು ನ.03 ಕ್ಕೆ ನಡೆಯಲಿವೆ. ಮತ ಎಣಿಕೆ ಪ್ರಕ್ರಿಯೆ ನ.10 ಕ್ಕೆ ನಡೆಯಲಿವೆ. 

ಚತ್ತೀಸ್ ಗಢ, ಗುಜರಾತ್, ಜಾರ್ಖಂಡ್, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ನಾಗಲ್ಯಾಂಡ್, ಒಡಿಶಾ, ತೆಲಂಗಾಣ ಹಾಗೂ ಉತ್ತರ ಪ್ರದೇಶದಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಹವಾಮಾನ, ಭದ್ರತಾ ಪಡೆಗಳ ರವಾನೆ, ಸಾಂಕ್ರಾಮಿಕ ರೋಗಗಳ ಸವಾಲುಗಳನ್ನು ಪರಿಗಣಿಸಿಯೇ ಚುನಾವಣಾ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದೇ ವೇಳೆ ನಾಲ್ಕು ರಾಜ್ಯಗಳಲ್ಲಿನ 7 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸದೇ ಇರಲು ಆಯೋಗ ನಿರ್ಧರಿಸಿದ್ದು ಇವುಗಳಿಗೆ ಮುಂದಿನ ವರ್ಷ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. 

SCROLL FOR NEXT