ದೇಶ

ಕೋವಿಡ್-19: ಹೆಚ್ಚಿನ ಅಪಾಯವಿರುವ ಜನರು, ಮುಂಚೂಣಿ ಕೆಲಸಗಾರರಿಗೆ ಮಾತ್ರ ಉಚಿತ ಲಸಿಕೆ ನೀಡಲು ತಜ್ಞರ ಗುಂಪು ಶಿಫಾರಸು

Nagaraja AB

ನವದೆಹಲಿ: ಹೆಚ್ಚಿನ ಅಪಾಯವಿರುವ ಜನರಿಗೆ ಮಾತ್ರ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ  ಉಚಿತ ಕೋವಿಡ್-19 ಲಸಿಕೆಯನ್ನು ನೀಡಬೇಕೆಂದು ತಜ್ಞರ ಗುಂಪು ಶಿಫಾರಸು ಮಾಡಿದ್ದು, ಹೆಚ್ಚಿನ ನಾಗರಿಕರು ಲಸಿಕೆ ಪಡೆಯಲು ತಮ್ಮ ಪಾಕೆಟ್ ಗಳಿಂದ ಪಾವತಿಸಬೇಕಾಗಲಿದೆ ಎಂಬುದು ತಿಳಿದುಬಂದಿದೆ.

ತಜ್ಞರ ಗುಂಪಿನ ಉನ್ನತ ಮೂಲಗಳು ಈ ಬಗ್ಗೆ ಪತ್ರಿಕೆಗೆ ತಿಳಿಸಿದ್ದು, ಇದುವರೆಗೆ ಸಿದ್ಧಪಡಿಸಿದ ಕಾರ್ಯತಂತ್ರದ ಪ್ರಕಾರ,  50 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಸಹ-ಅಸ್ವಸ್ಥತೆ ಹೊಂದಿರುವ ಜನರು ಮತ್ತು ಮುಂಚೂಣಿ ಕೆಲಸಗಾರರಿಗೆ ಮಾತ್ರ ಲಸಿಕೆ ನೀಡಲು ಸರ್ಕಾರ ಹಣ ಪಾವತಿಸಲಿದೆ.

ಇದುವರೆಗೆ ಅನೇಕ ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆಸಿದ ಸಿರೋ ಸರ್ವೇಗಳ ಪ್ರಕಾರ,  ಸುಮಾರು ಶೇ. 25-30% ಜನಸಂಖ್ಯೆಯು ಈಗಾಗಲೇ  ಸಾರ್ಸ್ CoV-2 ಗೆ ಒಡ್ಡಿಕೊಂಡಿವೆ.ಪರಿಣಾಮಕಾರಿ ಔಷಧಿ ಬರುವ ಹೊತ್ತಿಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಗುಂಪಿನ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಹೆಚ್ಚು ದುರ್ಬಲರಾಗಿರುವವರು ಮತ್ತು ಈ ಗುಂಪಿನ ಪೈಕಿ ಸಾರ್ಸ್ CoV-2 ಪ್ರತಿಕಾಯಕ್ಕಾಗಿ ನೆಗೆಟಿವ್ ಬಂದಿರುವವರಿಗೆ ಮಾತ್ರ ಲಸಿಕೆ ನೀಡಲು ಸರ್ಕಾರ ಹಣ ಪಾವತಿಸಲಿದೆ ಎಂದು ಅವರು ತಿಳಿಸಿದ್ದಾರೆ. ಒಂದು ಅಂದಾಜಿನಂತೆ ಲಸಿಕೆ ಅಗತ್ಯವಿರುವ ಜನಸಂಖ್ಯೆಯು 30 ರಿಂದ 40 ಕೋಟಿ ಇರಬಹುದು.

ನೀತಿ ಆಯೋಗದ ಸದಸ್ಯ ಡಾ. ವಿ. ಕೆ. ಪೌಲ್  ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೀಶ್ ಭೂಷಣ್ ನೇತೃತ್ವದ ಗುಂಪು ಸಿದ್ದಪಡಿಸಿರುವ ಲಸಿಕೆಯ ಯೋಜನೆಯನ್ನು ಅನುಮೋದನೆಗಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ.

SCROLL FOR NEXT