ದೇಶ

ರೈಲು ಸೇವೆ ನಿಲ್ಲಿಸುವ ಯಾವುದೇ ಯೋಚನೆ ಇಲ್ಲ, ಬೇಡಿಕೆ ಹೆಚ್ಚಿದರೆ ರೈಲು ಸಂಖ್ಯೆ ಹೆಚ್ಚಿಸಲಾಗುವುದು: ರೈಲ್ವೆ

Lingaraj Badiger

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಮೊಟಕುಗೊಳಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಯೋಚನೆ ಇಲ್ಲ ಎಂದು ರೈಲ್ವೆ ಮಂಡಳಿ ಶುಕ್ರವಾರ ಸ್ಪಷ್ಟಪಡಿಸಿದೆ.

ಕೊರೋನಾ ಹೆಚ್ಚಳದಿಂದ ಆತಂಕಗೊಂಡ ವಲಸೆ ಕಾರ್ಮಿಕರು ತಮ್ಮ ಊರಿಗೆ ಧಾವಿಸುತ್ತಿದ್ದಾರೆ ಎಂಬ ವರದಿಗಳ ಮಧ್ಯೆ ಬೇಡಿಕೆಯಂತೆ ರೈಲುಗಳನ್ನು ಒದಗಿಸಲಾಗುವುದು ಎಂದು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಭರವಸೆ ನೀಡಿದೆ.

ಪ್ರಯಾಣಿಕರಿಗೆ ರೈಲುಗಳ ಯಾವುದೇ ಕೊರತೆ ಇಲ್ಲ ಎಂದು ಭರವಸೆ ನೀಡಿದ ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಅವರು, ಹೆಚ್ಚಿನ ರೈಲು ಓಡಿಸಲು ಸಣ್ಣ ಮನವಿ ಬಂದರೂ ರೈಲ್ವೆ ಅವರ ಸೇವೆಗೆ ಸಿದ್ಧವಾಗಿದೆ ಎಂದಿದ್ದಾರೆ.

ರೈಲು ಸೇವೆಯನ್ನು ಮೊಟಕುಗೊಳಿಸುವ ಅಥವಾ ನಿಲ್ಲಿಸುವ ಯಾವುದೇ ಯೋಚನೆ ಇಲ್ಲ. ನಾವು ಅಗತ್ಯವಿರುವಷ್ಟು ರೈಲುಗಳನ್ನು ಓಡಿಸುತ್ತೇವೆ. ಹೆಚ್ಚಿನ ರೈಲುಗಳಿಗೆ ಬೇಡಿಕೆ ಇದ್ದರೆ ತಕ್ಷಣ ರೈಲುಗಳನ್ನು ಓಡಿಸಲಾಗುವುದು. ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ಸಾಮಾನ್ಯ ಮತ್ತು ದಟ್ಟಣೆಯನ್ನು ನಿವಾರಿಸಲು ನಾವು ಈಗಾಗಲೇ ರೈಲುಗಳನ್ನು ಘೋಷಿಸಿದ್ದೇವೆ ಎಂದು ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

SCROLL FOR NEXT