ದೇಶ

ಮಹಾರಾಷ್ಟ್ರ 1.10 ಕೋಟಿ ಡೋಸ್ ಲಸಿಕೆ ಪಡೆದಿದೆ, 1100 ವೆಂಟಿಲೇಟರ್‌ಗಳು ಸಹ ಸಿಗಲಿವೆ: ಪ್ರಕಾಶ್ ಜಾವಡೇಕರ್

Lingaraj Badiger

ಪುಣೆ: ಮಹಾರಾಷ್ಟ್ರ ಕೊರೋನಾ ಲಸಿಕೆ ಕೊರತೆ ಎದುರಿಸುತ್ತಿದೆ ಎಂಬ ವರದಿಗಳ ಮಧ್ಯೆಯೇ ರಾಜ್ಯಕ್ಕೆ ಇದುವರೆಗೆ 1.10 ಕೋಟಿ ಡೋಸ್ ಕೊರೋನಾ ಲಸಿಕೆ ಬಂದಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾವಡೇಕರ್, ಮಹಾರಾಷ್ಟ್ರ ಹೊರತಾಗಿ, ಗುಜರಾತ್ ಮತ್ತು ರಾಜಸ್ಥಾನ ಸಹ 1 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಪಡೆದ ಇತರ ಎರಡು ರಾಜ್ಯಗಳಾಗಿವೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರಕ್ಕೆ ಮುಂದಿನ ಮೂರು ದಿನಗಳಲ್ಲಿ 1,100 ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಬರಲಿವೆ ಎಂದು ಹೇಳಿದ್ದಾರೆ.

ಕೈಗಾರಿಕಾ ಉತ್ಪಾದನಾ ಘಟಕಗಳಿಂದ ಆಮ್ಲಜನಕ ಪೂರೈಕೆಯನ್ನು ಸಹ ರವಾನಿಸಲಾಗಿದೆ ಎಂದು ಅವರು, "ಶುಕ್ರವಾರ ಸಂಜೆ 6 ಗಂಟೆಯವರೆಗೆ ರಾಜ್ಯವ್ಯಾಪಿ ವರದಿಯ ಪ್ರಕಾರ, ಮಹಾರಾಷ್ಟ್ರವು 1.10 ಕೋಟಿ ಡೋಸ್ ಲಸಿಕೆ ಪಡೆದಿದೆ. ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಕೇವಲ ಮೂರು ರಾಜ್ಯಗಳು ಮಾತ್ರ 1 ಕೋಟಿ ಡೋಸ್ ಲಸಿಕೆ ಪಡೆದಿವೆ ಎಂದು ಕೇಂದ್ರ ಸಚಿವರು ತಿಳಿಸಿದರು.

ರಾಜ್ಯದಲ್ಲಿ ಲಸಿಕೆ ಪ್ರಮಾಣ ಲಭ್ಯತೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಆರೋಪ ಪ್ರತ್ಯಾರೋಪದ ಬಗ್ಗೆ ಪ್ರತಿಕ್ರಿಯಿಸಿದ ಜಾವಡೇಕರ್ ಅವರು, ರಾಜಕೀಯ ಮಾಡಲು ಇದು ಸರಿಯಾದ ಸಮಯವಲ್ಲ. ನಾವು ಯಾವಾಗ ರಾಜಕೀಯ ಮಾಡಬೇಕಾದ ಸಂದರ್ಭದಲ್ಲಿ ನಾವು ಅವರ ಆರೋಪಗಳಿಗೆ ಸರಿಯಾದ ಉತ್ತರವನ್ನು ನೀಡುತ್ತೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜನರ ಹಿತಾಸಕ್ತಿಗಿಂತ ದೊಡ್ಡದು ಮತ್ತೇನೂ ಇಲ್ಲ" ಎಂದರು.

SCROLL FOR NEXT