ದೇಶ

ಗೋಲಿಬಾರ್ ನಡೆದ ಸ್ಥಳಕ್ಕೆ ರಾಜಕೀಯ ವ್ಯಕ್ತಿಗಳನ್ನು ಹೋಗಲು ಬಿಡದೆ ಚುನಾವಣಾ ಆಯೋಗ ಸತ್ಯ ಮರೆಮಾಚಲು ಪ್ರಯತ್ನಿಸುತ್ತಿದೆ: ಮಮತಾ ಬ್ಯಾನರ್ಜಿ 

Sumana Upadhyaya

ಸಿಲಿಗುರಿ: ಪಶ್ಚಿಮ ಬಂಗಾಳದ ಸಿಟಾಲ್ಕುಚಿಯ ಕೂಚ್ ಬೆಹಾರ್ ನಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಐವರು ಮೃತಪಟ್ಟ ಘಟನೆಯನ್ನು ನರಹತ್ಯೆ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಾಸ್ತವ ಸತ್ಯವನ್ನು ಮುಚ್ಚಿಹಾಕಲು ರಾಜಕೀಯ ವ್ಯಕ್ತಿಗಳನ್ನು 72 ಗಂಟೆಗಳ ಕಾಲ ಜಿಲ್ಲೆಗೆ ಪ್ರವೇಶಿಸಲು ನಿರ್ಬಂಧ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟಿಎಂಸಿ ನಾಯಕಿ, ರಾಜ್ಯದಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿರುವಾಗ ಕೇಂದ್ರ ಪಡೆಗಳು ಸಿಟಾಲ್ಕುಚಿ ಪ್ರದೇಶದಲ್ಲಿ ಮುಗ್ದ ಜನರನ್ನು ಗುರಿಯಾಗಿಟ್ಟುಕೊಂಡು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಟಲ್ಕುಚಿಯಲ್ಲಿ ನರಹತ್ಯೆ ನಡೆದಿದೆ. ಏಪ್ರಿಲ್ 14ಕ್ಕೆ ನಾನು ಅಲ್ಲಿಗೆ ಹೋಗುತ್ತೇನೆ. ಆದರೆ ಕೂಚ್ ಬೆಹಾರ್ ಗೆ ಪ್ರವೇಶ ನಿರ್ಬಂಧಿಸಿ ವಾಸ್ತವವನ್ನು ಮರೆಮಾಚಲು ಚುನಾವಣಾ ಆಯೋಗ ಯತ್ನಿಸುತ್ತಿದೆ. ನಮ್ಮಲ್ಲಿ ಅಸಮರ್ಥ ಗೃಹ ಸಚಿವ ಮತ್ತು ಅಸಮರ್ಥ ಕೇಂದ್ರ ಸರ್ಕಾರವಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ನಿನ್ನೆ ಸಿಐಎಸ್ಎಫ್ ಸಿಬ್ಬಂದಿ ಮತಗಟ್ಟೆಯ ಸಮೀಪ ಮತದಾನ ನಡೆಯುತ್ತಿದ್ದ ವೇಳೆ ಸ್ಥಳೀಯರು ರೈಫಲ್ ಕಸಿಯಲು ಪ್ರಯತ್ನಿಸುತ್ತಿದ್ದ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಕೇಂದ್ರ ಮೀಸಲು ಪಡೆಗೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕೆಂದು ತಿಳಿದಿಲ್ಲ. ಮೊದಲ ಹಂತದ ಚುನಾವಣೆ ನಂತರ, ಕೇಂದ್ರ ಪೊಲೀಸ್ ಪಡೆಯ ವರ್ಗವೊಂದು ಜನರ ಮೇಲೆ ದೌರ್ಜನ್ಯ ನಡೆಸುತ್ತಲೇ ಬಂದಿದೆ. ಈ ಬಗ್ಗೆ ನಾನು ನಂದಿಗ್ರಾಮದಲ್ಲಿಯೇ ಪ್ರಸ್ತಾಪ ಮಾಡಿದ್ದೆ, ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ ಎಂದರು.

SCROLL FOR NEXT