ದೇಶ

ಕೋವಿಡ್-19 ಎರಡನೇ ಅಲೆ: ಹಿಂದೆಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳು- ಕೇಂದ್ರ ಸರ್ಕಾರ

Nagaraja AB

ನವದೆಹಲಿ: ದೇಶದಲ್ಲಿನ ಕೋವಿಡ್ ಎರಡನೇ ಅಲೆಯೂ ಹಿಂದಿನ ವರ್ಷದ ಹೆಚ್ಚಳಕ್ಕಿಂತಲೂ ಜಾಸ್ತಿಯಾಗಿದೆ. ಮೇಲ್ಮುಖವಾಗಿ ಟ್ರೆಂಡ್ ಸಾಗುತ್ತಿದೆ. ಇದು ದೇಶದ ಆತಂಕಕ್ಕೆ ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ತಿಳಿಸಿದ್ದಾರೆ.

ದೇಶದಲ್ಲಿ ಶೇ. 89.51 ರಷ್ಟು ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಶೇ.1.25 ರಷ್ಟು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಸ್ತುತ ಶೇ. 9.24 ರಷ್ಟು ಸಕ್ರಿಯ ಪ್ರಕರಣಗಳಿವೆ. ಹೊಸ ಪ್ರಕರಣಗಳನ್ನು ನೋಡಿದಾಗ, ಹಿಂದೆಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬರುತ್ತಿವೆ ಇದು ಆತಂಕಕ್ಕೆ ಕಾರಣವಾಗಿದೆ ಎಂದು ಭೂಷಣ್ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು 57 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಪ್ರತಿ ಮಿಲಿಯನ್ ಗೆ ಟೆಸ್ಟ್  ಕೂಡಾ ಮುಂದುವರೆದಿದೆ ಆದರೆ, ಸರಾಸರಿ ದೈನಂದಿನ ಪ್ರಕರಣಗಳ ಬೆಳವಣಿಗೆಯೊಂದಿಗೆ ಅದರ ವೇಗ ಸರಿಯಾಗಿಲ್ಲ. ಆರ್ ಟಿ-ಪಿಸಿಆರ್ ಪರೀಕ್ಷೆ ಪಾಲನ್ನು ನೋಡಿದರೆ ಅದು ಕ್ರಮೇಣ ಕಡಿಮೆಯಾಗುತ್ತಿದೆ ಎಂದರು.

ಛತ್ತೀಸ್ ಗಢದಲ್ಲೂ ಕೂಡಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಫೆಬ್ರವರಿ ಮಧ್ಯದಿಂದಲೂ ಪ್ರತಿದಿನ 200 ಕೇಸ್ ಗಳು ಬರುತ್ತಿದ್ದವು. ಆದರೆ, ಈಗ ಅದು 11,504ಕ್ಕೆ ಏರಿಕೆಯಾಗಿದೆ. ಪ್ರತಿ ಮಿಲಿಯನ್‌ ನಂತೆ ಸರಾಸರಿ ಪರೀಕ್ಷೆಯು ಹೆಚ್ಚಾಗಿದೆ ಆದರೆ ಪ್ರಕರಣದ ಬದಲಾವಣೆಯೊಂದಿಗೆ ಅದರ ವೇಗವನ್ನು ಉಳಿಸಿಕೊಂಡಿಲ್ಲ. ಸರಾಸರಿ ದೈನಂದಿನ ಆರ್‌ಟಿ-ಪಿಸಿಆರ್ ಪಾಲು ಶೇ. 28-30ರಷ್ಟಿದೆ ಮತ್ತು ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವಿದೆ "ಎಂದು ಅವರು ಹೇಳಿದರು.

SCROLL FOR NEXT