ದೇಶ

ವಾರ್ಷಿಕ 850ಮಿಲಿಯನ್ ಸ್ಪುಟ್ನಿಕ್ ಡೋಸ್ ತಯಾರಿಸಲಿರುವ ಭಾರತ

Srinivas Rao BV

ನವದೆಹಲಿ: ರಷ್ಯಾದಲ್ಲಿ ಅಭಿವೃದ್ಧಿಯಾಗಿರುವ ಕೋವಿಡ್-19 ಲಸಿಕೆ ಸ್ಪುಟ್ನಿಕ್-V ಗೆ ಭಾರತದಲ್ಲಿ ಅನುಮತಿ ದೊರೆತಿದ್ದು, ಆ ದೇಶದ ಲಸಿಕೆ ಬಳಕೆ ಪ್ರಾರಂಭಿಸಲಿರುವ 60 ನೇ ರಾಷ್ಟ್ರವಾಗಿದೆ ಭಾರತ.

ರಷ್ಯಾದ ನೇರ ಬಂಡವಾಳ ನಿಧಿ (ಆರ್ ಡಿಐಎಫ್) ಈ ಬಗ್ಗೆ ಮಾಹಿತಿ ನೀಡಿದ್ದು,  ಭಾರತದಲ್ಲಿ 850 ಮಿಲಿಯನ್ ಡೋಸ್ ಲಸಿಕೆಗಳನ್ನು ಭಾರತ ತಯಾರಿಸಲಿದೆ ಎಂದು ಹೇಳಿದೆ. 

ಭಾರತದ ಔಷಧ ನಿಯಂತ್ರಕ ಈ ಲಸಿಕೆಯನ್ನು ತುರ್ತು ಬಳಕೆಯ ಅಡಿಯಲ್ಲಿ ಬಳಕೆ ಮಾಡುವುದಕ್ಕೆ ನೋಂದಾಯಿಸಿದೆ.

ರಷ್ಯಾದಲ್ಲಿ ನಡೆದಿರುವ ಕ್ಲಿನಿಕಲ್ ಟ್ರಯಲ್ ಗಳು ಹಾಗೂ ಭಾರತದಲ್ಲಿ ಡಾ. ರೆಡ್ಡೀಸ್ ಪ್ರಯೋಗಾಲಯದಲ್ಲಿ ನಡೆದಿರುವ ಮೂರನೇ ಹಂತದ ಹೆಚ್ಚುವರಿ ಸ್ಥಳೀಯ ಕ್ಲಿನಿಕಲ್ ಟ್ರಯಲ್ ಗಳ ದತ್ತಾಂಶಗಳನ್ನು ಪಡೆದು ಔಷಧ ನಿಯಂತ್ರಕ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

ರಷ್ಯಾದ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡಿರುವ, ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತವಾಗಿದ್ದು, ಮುಂಚೂಣಿಯಲ್ಲಿರುವ ಉತ್ಪಾದನಾ ಹಬ್ ಆಗಿದೆ ಎಂದು ರಷ್ಯಾ ತಿಳಿಸಿದೆ.

ರಷ್ಯಾದ ಆರ್ ಡಿಐಎಫ್ ಭಾರತದ ಗ್ಲಾಂಡ್ ಫಾರ್ಮಾ,  ಹೆಟೆರೊ ಬಯೋಫಾರ್ಮಾ, ಪ್ಯಾನೇಸಿಯಾ ಬಯೋಟೆಕ್, ಸ್ಟೆಲಿಸ್ ಬಯೋಫಾರ್ಮಾ ಮತ್ತು ವಿರ್ಚೋ ಬಯೋಟೆಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಾರ್ಷಿಕ 850 ಮಿಲಿಯನ್ ಡೋಸ್ ಗಳಷ್ಟು ಸ್ಪುಟ್ನಿಕ್ ಲಸಿಕೆಗಳನ್ನು ತಯಾರಿಸಲಿದೆ.

SCROLL FOR NEXT