ದೇಶ

'ವ್ಯಾಕ್ಸಿನೇಷನ್ ಡ್ರೈವ್' ಹೆಚ್ಚಿಸಿ: ಪ್ರಧಾನಿ ಮೋದಿಗೆ ಮನ್ ಮೋಹನ್ ಸಿಂಗ್ ಪತ್ರ!

Nagaraja AB

ನವದೆಹಲಿ: ದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿರುವ ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್, ಸಾಂಕ್ರಾಮಿಕ ವಿರುದ್ಧ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿರುವ ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. 

ಸಂಪೂರ್ಣ ಸಂಖ್ಯೆಯತ್ತ ನೋಡಬಾರದು, ಆದರೆ, ಲಸಿಕೆ ಪಡೆದುಕೊಂಡ ಶೇಕಡವಾರು ಜನಸಂಖ್ಯೆ ಕಡೆಗೆ ಗಮನ ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಸಲಹೆ ನೀಡಿದ್ದಾರೆ.

ಕೋವಿಡ್-19 ವಿರುದ್ದದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿರುವ ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಪ್ರಯತ್ನಿಸಬೇಕು, ಎಷ್ಟು ಸಂಖ್ಯೆಯ ಲಸಿಕೆ ಹಾಕಲಾಗಿದೆ ಎಂಬುದನ್ನು ನೋಡಬಾರದು. ಲಸಿಕೆ ಪಡೆದ ಶೇಕಡಾವಾರು ಜನಸಂಖ್ಯೆ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಅವರು ಹೇಳಿದ್ದಾರೆ. 

ಭಾರತ ಪ್ರಸ್ತುತ ತನ್ನ ಜನಸಂಖ್ಯೆಯ ಒಂದು ಸಣ್ಣ ಭಾಗಕ್ಕೆ ಮಾತ್ರ ಲಸಿಕೆ ನೀಡಿದೆ ಎಂಬುದನ್ನು ಗಮನಿಸಿರುವ ಸಿಂಗ್, ಸರಿಯಾದ ನೀತಿ ವಿನ್ಯಾಸದೊಂದಿಗೆ, ನಾವು ಹೆಚ್ಚು ಉತ್ತಮವಾಗಿ ಮತ್ತು ತ್ವರಿತವಾಗಿ ಲಸಿಕೆ ನೀಡಬೇಕಾಗಿದೆ.  ಸಾಂಕ್ರಾಮಿಕದ ವಿರುದ್ಧ ಹೋರಾಡಲು ನಾವು ಅನೇಕ ಕೆಲಸಗಳನ್ನು ಮಾಡಬೇಕು ಆದರೆ,  ಈ ಪ್ರಯತ್ನದ ಒಂದು ದೊಡ್ಡ ಭಾಗವಾಗಿ ವ್ಯಾಕ್ಸಿನೇಷನ್ ಹೆಚ್ಚಳ ಸೇರಿದಂತೆ ಇನ್ನೂ ಅನೇಕ ಸಲಹೆಗಳನ್ನು ಮನ ಮೋಹನ್ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ  ಸಾಂಕ್ರಾಮಿಕದ ವಿರುದ್ಧ ಹೋರಾಡಲು ಕೈಗೊಳ್ಳಬೇಕಾದ ಪ್ರಯತ್ನಗಳ ಬಗ್ಗೆ ಚರ್ಚಿಸಿದ ಚರ್ಚಿಸಿದ ಬೆನ್ನಲ್ಲೇ, ಮನ್ ಮೋಹನ್ ಸಿಂಗ್ ಈ ಸಲಹೆ ನೀಡಿದ್ದಾರೆ. ಅಲ್ಲದೇ,  ಮುಂದಿನ ಆರು ತಿಂಗಳುಗಳಿಗೆ ಆರ್ಡರ್ ಮತ್ತು ಪೂರೈಸಬೇಕಾದ ಲಸಿಕೆ ಡೋಸ್ ಗಳನ್ನು ಕೇಂದ್ರ ಸರ್ಕಾರ  ಪ್ರಕಟಿಸಬೇಕು ಎಂದು ಡಾ. ಮನ್ ಮೋಹನ್ ಸಿಂಗ್ ಒತ್ತಾಯಿಸಿದ್ದಾರೆ. 

SCROLL FOR NEXT