ಸಂಗ್ರಹ ಚಿತ್ರ 
ದೇಶ

ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬನ್ನಿ: ಆಮಂತ್ರಣ ಪತ್ರಿಕೆಯಲ್ಲಿ ನವಜೋಡಿ ಮನವಿ

ಇತ್ತೀಚಿನ ದಿನಗಳಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭಗಳನ್ನು ನಡೆಸುವ ಜನರ ಮಧ್ಯೆ ಇಲ್ಲೊಂದು ನವಜೋಡಿ ಇತರರಿಗೆ ಮಾದರಿಯಾಗಿದ್ದಾರೆ. 

ಉತ್ತರಾಖಂಡ; ಇತ್ತೀಚಿನ ದಿನಗಳಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭಗಳನ್ನು ನಡೆಸುವ ಜನರ ಮಧ್ಯೆ ಇಲ್ಲೊಂದು ನವಜೋಡಿ ಇತರರಿಗೆ ಮಾದರಿಯಾಗಿದ್ದಾರೆ. 

ಉತ್ತರಾಖಂಡದ ನವ ಜೋಡಿಯೊಂದು ಆರ್'ಟಿ-ಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರುವಂತೆ ಆಮಂತ್ರಣ ಪತ್ರಿಕೆಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿಯೇ ಸುರಕ್ಷತಾ ಕ್ರಮದ ಬಗ್ಗೆ ನವಜೊಡಿ ಜಾಗೃತಿವಹಿಸಿ ಸಂದೇಶ ಪ್ರಕಟಿಸಿರುವುದು ವಿಶೇಷವಾಗಿದೆ. 

ವಿಜಯ್ ಸಿಂಗ್ ಮತ್ತು ವೈಶಾಲಿ ಎಂಬ ನವಜೋಡಿ ಇದೇ ಏಪ್ರಿಲ್ 24 ರಂದು ಜೈಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನವಜೋಡಿ ಮದುವೆ ಆಮಂತ್ರಣ ಪತ್ರದಲ್ಲಿ, ಮದುವೆಗೆ ಆಗಮಿಸುವ ಅತಿಥಿಗಳು ಕೊರೋನಾ ನೆಗೆಟಿವ್​ ವರದಿ ಕಡ್ಡಾಯವಾಗಿ ತರುವಂತೆ ವಿನಂತಿಸಿಕೊಂಡಿದ್ದಾರೆ. ಎಲ್ಲರೂ ದಯವಿಟ್ಟು ಟೆಸ್ಟ್​ ರಿಪೋರ್ಟ್​ ಹಿಡಿದುಕೊಂಡು ಮದುವೆಗೆ ಬನ್ನಿ ಎಂದು ತಿಳಿಸಿದ್ದಾರೆ. 

ಮದುವೆ ಆಮಂತ್ರಣ ಪತ್ರವನ್ನು ವಿತರಿಸುವ ಮೊದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಭೆ ಸಮಾರಂಭ, ವಿವಾಹ ಕಾರ್ಯಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ ನಮಗೆ ತಿಳಿದಿತ್ತು. ಎಲ್ಲಾ ಮಾರ್ಗಸೂಚಿಗಳನ್ನು ಮದುವೆ ಸಮಾರಂಭದಲ್ಲಿ ನಾವು ಅನುಸರಿಸುತ್ತೇವೆ ಎಂದು ವರ ವಿಜಯ್ ಹೇಳಿದ್ದಾರೆ.

ಮದುವೆಗೆ 300-400 ಜನರನ್ನು ಆಹ್ವಾನಿಸಲು ನಿರ್ಧರಿಸಿದ್ದೆವು. ಆದರೀಗ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 30-40 ಜನರಿಗೆ ಮಾತ್ರ ಆಮಂತ್ರಣ ಪತ್ರಿಕೆ ನೀಡಲಾಗುತ್ತಿದೆ ಎಂದು ವಧು ವೈಶಾಲಿ ಹೇಳಿದ್ದಾರೆ. 

ಸಾಂಕ್ರಾಮಿಕ ರೋಗ ಅತ್ಯಂತ ಶೀಘ್ರಗತಿಯಲ್ಲಿ ಹರಡುತ್ತಿದೆ. ಹೀಗಾಗಿ ನಾವು ಅತ್ಯಂತ ಜಾಗರೂಕರಾಗಿ ಇರಬೇಕಿದೆ. ನಮ್ಮ ಶ್ರಮವು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಆಗಿದೆ. ಸೋಂಕಿನಿಂದ ಜನರು ತಪ್ಪಿಸಿಕೊಳ್ಳಲು ಸಹಾಯವಾಗಲಿಗೆ ಎಂದು ತಿಳಿಸಿದ್ದಾರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT