ದೇಶ

ರೆಮ್ಡಿಸಿವಿರ್ ಮ್ಯಾಜಿಕ್ ಬುಲೆಟ್ ಅಲ್ಲ: ಏಮ್ಸ್ ಮುಖ್ಯಸ್ಥ

Srinivas Rao BV

ನವದೆಹಲಿ: ಕೋವಿಡ್-19 ರೋಗಿಗಳಿಗೆ ನೀಡಲಾಗುವ ರೆಮ್ಡಿಸಿವಿರ್ ಔಷಧಕ್ಕೆ ಕೆಲವೆಡೆ ಕೊರತೆ ಉಂಟಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಿರುವುದರ ನಡುವೆಯೇ ಏಮ್ಸ್ ನ ನಿರ್ದೇಶಕ ಡಾ. ರಣ್ ದೀಪ್ ಗುಲೇರಿಯಾ ರೆಮ್ಡಿಸಿವಿರ್ ಬಗ್ಗೆ ಮಾತನಾಡಿದ್ದಾರೆ. 

"ಒಂದು ವರ್ಷದ ಕೋವಿಡ್-19 ನಿರ್ವಹಣೆಯಲ್ಲಿ ಎರಡು ಪ್ರಮುಖ ಅಂಶಗಳನ್ನು ಅರಿತಿದ್ದೇವೆ. ಅದೇನೆಂದರೆ ಔಷಧ ಹಾಗೂ ಔಷಧದ ಟೈಮಿಂಗ್. ಅತಿ ಬೇಗ ಅಥವಾ ಅತೀ ವಿಳಂಬವಾಗಿ ಔಷಧ ನೀಡಿದರೆ ಅದು ಮನುಷ್ಯನಿಗೆ ಹಾನಿಯುಂಟಾಗಲಿದೆ. ಮೊದಲ ದಿನವೇ ಡ್ರಗ್ಸ್ ಕಾಕ್ಟೈಲ್ ನೀಡುವುದು ರೋಗಿಯನ್ನು ಸಾಯಿಸಬಹುದು ಹಾಗೂ ಇನ್ನೂ ಮಾರಕವಾಗಬಲ್ಲದು ಎಂದು ಡಾ. ರಣ್ ದೀಪ್ ಗುಲೇರಿಯಾ ತಿಳಿಸಿದ್ದಾರೆ. 

ಈ ಹಂತದಲ್ಲಿ ರೆಮ್ಡಿಸಿವಿರ್ ಔಷಧ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮಾಜಿಕ್ ಬುಲೆಟ್ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವೈರಾಣು ನಿವಾರಕ ಔಷಧ ಇಲ್ಲದೇ ಇರುವ ಕಾರಣದಿಂದ ನಾವು ಅದನ್ನು ಬಳಸಬಹುದು ಅಷ್ಟೇ. ರೋಗ ಲಕ್ಷಣಗಳೇ ಇಲ್ಲದಿದ್ದರೂ, ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊಂದಿರುವವರಿಗೆ ನೀಡಿದರೂ ಅದರಿಂದ ಪ್ರಯೋಜನವಾಗುವುದಿಲ್ಲ. ವಿಳಂಬ ಮಾಡಿ ನೀಡಿದರೂ ಅದರಿಂದ ಪ್ರಯೋಜನವಿಲ್ಲ ಎಂದು ಡಾ. ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವವರು, ಆಮ್ಲಜನಕ ಕಡಿಮೆ ಇರುವವರು ಚೆಸ್ಟ್ ಎಕ್ಸ್ ರೇ, ಸಿಟಿ ಸ್ಕ್ಯಾನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡವರಿಗೆ ಮಾತ್ರ ನೀಡಬಹುದೆಂದು ಗುಲೇರಿಯಾ ತಿಳಿಸಿದ್ದಾರೆ. 

SCROLL FOR NEXT