ದೇಶ

ಭಾರತೀಯ ನೌಕಾಪಡೆಯ ದೊಡ್ಡ ಬೇಟೆ: ಅರಬ್ಬೀ ಸಮುದ್ರದಲ್ಲಿ 3,000 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

Vishwanath S

ನವದೆಹಲಿ: ಅರಬ್ಬೀ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ 300 ಕೆಜಿಯಷ್ಟು ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ.

ಇತ್ತೀಚಿನ ತಿಂಗಳುಗಳಲ್ಲಿ ಭದ್ರತಾ ಪಡೆಗಳು ಮಾದಕವಸ್ತುಗಳ ಸಾಗಣೆಯನ್ನು ಪತ್ತೆ ಹಚ್ಚಿ, ವಶಪಡಿಸಿಕೊಳ್ಳುವ ಮೂಲಕ  ಯಶಸ್ವಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಅರೇಬಿಯನ್ ಸಮುದ್ರದಲ್ಲಿ ಕಣ್ಗಾವಲು ಗಸ್ತು ತಿರುಗುತ್ತಿದ್ದ ಸುವರ್ಣ ಹೆಸರಿನ ನೌಕಾ ಹಡಗು ಸಿಬ್ಬಂದಿ ಮೀನುಗಾರಿಕಾ ಹಡಗೊಂದಿನ ಅನುಮಾನಾಸ್ಪ ಚಲನವಲಯವನ್ನು ಗುರುತಿಸಿದ್ದಾರೆ. ಕೂಡಲೇ ಹಡಗನ್ನು ನಿಲ್ಲಿಸಿದ ನೌಕಾಪಡೆಯ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದು ಈ ವೇಳೆ 300 ಕೆಜಿಗಿಂತ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈಗ ವಶಪಡಿಸಿಕೊಳ್ಳಲಾಗಿರುವ ಮಾದಕವಸ್ತುವಿನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ವೆಚ್ಚ 3,000 ಕೋಟಿ ರೂಪಾಯಿ ಎಂದು ಹೇಳಿದ್ದಾರೆ. 

ನೌಕಾಪಡೆಯ ಪ್ರಕಾರ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೆಚ್ಚಿನ ತನಿಖೆಗಾಗಿ ನೌಕಾಪಡೆ ಸಿಬ್ಬಂದಿ ಹಡಗನ್ನು ಕೇರಳದ ಕೊಚ್ಚಿ ಬಂದರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. 

ಕಳೆದ ವರ್ಷದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸುಮಾರು 5,200 ಕೋಟಿ ರೂ.ಗಳ 1.6 ಟನ್ಗಳಷ್ಟು ಮಾದಕವಸ್ತುಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ.

SCROLL FOR NEXT