ದೇಶ

ಆಲ್ಕೋಹಾಲ್ ನಿಂದ ಮಾತ್ರ ಕೊರೋನಾ ಓಡಿಸಲು ಸಾಧ್ಯ, ಔಷಧಿಗಳಿಂದ ಪ್ರಯೋಜನವಿಲ್ಲ: ದೆಹಲಿ ಮಹಿಳೆಯ ಮನದಾಳದ ಮಾತು!

Sumana Upadhyaya

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಕೈಮೀರಿ ಹೋಗುತ್ತಿರುವಾಗ ನಿಯಂತ್ರಣ ಹೇರಲು ಸರ್ಕಾರ 6 ದಿನಗಳ ಲಾಕ್ ಡೌನ್ ಘೋಷಿಸಿದೆ. ಅಗತ್ಯ ಸೇವೆಗಳು, ವಸ್ತುಗಳು ಬಿಟ್ಟರೆ ಬೇರೆ ಏನೂ ಜನರಿಗೆ ಇನ್ನು 6 ದಿನ ಸಿಗುವುದಿಲ್ಲ.

ಹೀಗಾಗಿ ಇಂದು ದೆಹಲಿಯಲ್ಲಿ ಲಿಕ್ಕರ್ ಶಾಪ್ ಗಳ ಮುಂದೆ ಜನರು ಸಾಲಿನಲ್ಲಿ ನಿಂತು ಮದ್ಯ ಖರೀದಿಸುವುದು ಕಂಡುಬಂತು. ಲಾಕ್ ಡೌನ್ ಘೋಷಣೆಯಾದ ಕೂಡಲೇ ಮದ್ಯಪ್ರಿಯರು ಬಾರ್ ಗಳಿಗೆ, ಲಿಕ್ಕರ್ ಮಳಿಗೆಗಳಿಗೆ ಎಡತಾಕಿದ್ದಾರೆ. ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಜನರು ಮದ್ಯ ಖರೀದಿಸುವುದರಲ್ಲಿ ಬ್ಯುಸಿಯಾಗಿರುವುದು ಕಂಡುಬಂತು. 

ಈ ಸಂದರ್ಭದಲ್ಲಿ ಶಿವಪುರಿ ಗೀತಾ ಕಾಲೊನಿಯಲ್ಲಿ ಮದ್ಯ ಖರೀದಿಸಲು ಬಂದ ಮಹಿಳೆ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಇಂಜೆಕ್ಷನ್, ಲಸಿಕೆಗಳಿಂದ ಕೊರೋನಾ ಓಡುವುದಿಲ್ಲ, ಅವುಗಳಿಂದ ಏನೂ ಪ್ರಯೋಜನವಿಲ್ಲ, ಆಲ್ಕೋಹಾಲ್ ಕೆಲಸ ಮಾಡುತ್ತದೆ, ಅದರಿಂದ ದೇಹಕ್ಕೆ ಆರೋಗ್ಯ ಸಿಗುತ್ತದೆ ಎನ್ನುತ್ತಾರೆ. ಮೆಡಿಸಿನ್ ಸಹಾಯ ಮಾಡುವುದಿಲ್ಲ, ಒಂದು ಪೆಗ್ ಹಾಕಿದರೆ ಎಲ್ಲ ಹೋಗುತ್ತದೆ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ.

SCROLL FOR NEXT