ದೇಶ

ಕೊರೋನಾ ಹೆಚ್ಚಳ: ಕೈ ಮುಗಿದು ಕೇಳ್ತಿನಿ, ಒಂದೆರಡು ದಿನಗಳಲ್ಲಿ ಚುನಾವಣೆ ಮುಗಿಸಿ; ಆಯೋಗಕ್ಕೆ ಮಮತಾ ಒತ್ತಾಯ 

Nagaraja AB

ಚಾಕುಲಿಯಾ: ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಈ ಹಿಂದೆ ಘೋಷಿಸಿದ್ದಂತೆ ಮೂರು ಹಂತದ ಬದಲಿಗೆ ಒಂದು ಅಥವಾ ಎರಡು ದಿನಗಳಲ್ಲಿ  ಚುನಾವಣೆಯನ್ನು ಮುಗಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಉತ್ತರ್ ದಿನಾಜ್ ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, ಉಳಿದ ಹಂತದ ಚುನಾವಣೆಗಳನ್ನು ಒಟ್ಟಿಗೆ ಮಾಡದೆ ಬಿಜೆಪಿ ಪರವಾಗಿ ಆಯೋಗ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದ ಅವರು, ಚುನಾವಣಾ ಆಯೋಗ ಸಾರ್ವಜನಿಕರ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದರು.

ಕೈ ಮುಗಿದು ಚುನಾವಣಾ ಆಯೋಗದ ಬಳಿ ಮನವಿ ಮಾಡುತ್ತೇನೆ. ಮುಂದಿನ ಮೂರು ಹಂತದ ಚುನಾವಣೆಯನ್ನು ಒಂದೇ ಹಂತದಲ್ಲಿ ಮುಗಿಸಿ, ಇಲ್ಲವೇ ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಿ, ಒಂದು ದಿನ ಉಳಿಸಿ, ಬಿಜೆಪಿ ಏನು ಹೇಳುತ್ತದೆಯೋ ಅದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಡಿ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಚುನಾವಣಾ ದಿನಾಂಕವನ್ನು ಮೊಟುಕಗೊಳಿಸಿ, ಸಾಧ್ಯವಾದಲ್ಲಿ ಒಂದೇ ದಿನ ಮುಗಿಸಿ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ತಾನು ಹಾಗೂ ಟಿಎಂಸಿಯ ಇತರ ಮುಖಂಡರು ಯಾವುದೇ ಚುನಾವಣಾ ರ‍್ಯಾಲಿಯನ್ನು ಮಾಡುವುದಿಲ್ಲ ಎಂದು  ಹೇಳಿದ ಮಮತಾ, ಲಸಿಕೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕಳೆದ ಆರು ತಿಂಗಳಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು. ಬಿಜೆಪಿಯವರು ದಂಗೆಕೋರರು, ಬಂಗಾಳವನ್ನು ಗುಜರಾತ್ ಆಗಲು ಅವರಿಗೆ ಅವಕಾಶ ಮಾಡಿಕೊಡಬೇಡಿ ಎಂದು ಜನರಲ್ಲಿ ಅವರು ಮನವಿ ಮಾಡಿಕೊಂಡರು.

SCROLL FOR NEXT