ಸಂಗ್ರಹ ಚಿತ್ರ 
ದೇಶ

ಕೇರಳದಲ್ಲೊಂದು 'ದೃಶ್ಯಂ' ಶೈಲಿಯ ಪ್ರಕರಣ: ಸೋದರನನ್ನು ಕೊಂದು ಶವವನ್ನು ಹೂತಿಟ್ಟ ವ್ಯಕ್ತಿ ಸೆರೆ!

"ದೃಶ್ಯಂ" ಸಿನಿಮಾ ಶೈಲಿಯಲ್ಲಿ ನಡೆದ ಘಟನೆಯೊಂದರಲ್ಲಿ 44 ವರ್ಷದ ವ್ಯಕ್ತಿಯನ್ನು ಆತನ ಸಹೋದರನೇ  ಹೊಡೆದು ಕೊಂದಿದಲ್ಲದೆ ಶವವನ್ನು ತಾಯಿಯ ಸಹಾಯ ಪಡೆದು ಹೂತಿದ್ದ ಘಟನೆ ಎರಡು ವರ್ಷಗಳ ಸುದೀರ್ಘ ಅವಧಿಯ ಬಳಿಕ ಬೆಳಕು ಕಂಡಿದೆ.

ಕೊಲ್ಲಂ (ಕೇರಳ): "ದೃಶ್ಯಂ" ಸಿನಿಮಾ ಶೈಲಿಯಲ್ಲಿ ನಡೆದ ಘಟನೆಯೊಂದರಲ್ಲಿ 44 ವರ್ಷದ ವ್ಯಕ್ತಿಯನ್ನು ಆತನ ಸಹೋದರನೇ  ಹೊಡೆದು ಕೊಂದಿದಲ್ಲದೆ ಶವವನ್ನು ತಾಯಿಯ ಸಹಾಯ ಪಡೆದು ಹೂತಿದ್ದ ಘಟನೆ ಎರಡು ವರ್ಷಗಳ ಸುದೀರ್ಘ ಅವಧಿಯ ಬಳಿಕ ಬೆಳಕು ಕಂಡಿದೆ. ಸಂಬಂಧಿಯೊಬ್ಬರು ಪೊಲೀಸರಿಗೆ ಸೂಚನೆ ನೀಡಿದ ನಂತರ ಪ್ರಕರಣದ ಬಗ್ಗೆ ತಿಳಿದುಬಂದಿದೆ.

ಎರಡು ವರ್ಷಗಳ ಹಿಂದೆ ಕೇರಳದ ಕೊಲ್ಲಂನ ಅಂಚಲ್ ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಸಂಬಂಧಿಕರು ಕೊಲೆ ಮಾಡಿ ಅವರ ಮನೆಯ ಬಳಿ ಹೂತಿದ್ದಾರೆ ಎಂದು ಸುಳಿವು ಅರಿತ ಪಥನಮತ್ತಟ್ಟ  ಪೋಲೀಸರು ಆರೋಪಿಯನ್ನು ಬಂಧಿಸಿದಾರೆ. 

ಮೃತನನ್ನು ಎರೂರ್ ಮೂಲದ 44 ವರ್ಷದ ಶಾಜಿ ಪೀಟರ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಕೊಲ್ಲಂನಲ್ಲಿರುವ ಪೋಲೀಸರಿಂದ ಸುಳಿವು ಸಿಕ್ಕಿದ ಬಳಿಕ ಎರೂರ್ ಪೊಲೀಸರು ತಕ್ಷಣ ಶಾಜಿಯ ಹಿರಿಯ ಸಹೋದರ ಸಾಜಿನ್ ಪೀಟರ್, ತಾಯಿ ಪೊನ್ನಮ್ಮ ಮತ್ತು ಸಾಜಿನ್ ಅವರ ಪತ್ನಿ ಆರ್ಯಾಳನ್ನು ವಶಕ್ಕೆ ತೆಗೆದುಕೊಂಡರು. ಮೃತದೇಹವನ್ನು ಹೂತಿದ್ದ ಸ್ಥಳವನ್ನು ಪೊಲೀಸರು ಬುಧವಾರ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ಪರಿಶೀಲಿಸಲಿದ್ದಾರೆ.

ಈ ಘಟನೆ ನಡೆದದ್ದು 2018 ರ ಓಣಂ ಋತುವಿನಲ್ಲಿ  . ಶಾಜಿ ಪೀಟರ್ ಅವಿವಾಹಿತರಾಗಿದ್ದ ಮತ್ತು ಮನೆಯಿಂದ ದೂರವಾಗಿದ್ದ, ಅವರು 2018 ರಲ್ಲಿ ಓಣಂ ಋತುವಿನಲ್ಲಿ ತಮ್ಮ ಪೂರ್ವಜರ ಮನೆಗೆ ಬಂದಿದ್ದರು. ಏತನ್ಮಧ್ಯೆ, ಶಾಜಿ ತನ್ನ ಅಣ್ಣ ಸಾಜಿನ್ ಅವರ ಹೆಂಡತಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದು ಕೊಲೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಪೊಲೀಸರಿಗೆ ದೊರೆತ ಮಾಹಿತಿಯಂತೆ ಸಾಜಿನ್ ಪೀಟರ್ ಅವನನ್ನು ಥಳಿಸಿ ಕೊಂದಿದ್ದಾನೆ. ತಾಯಿ ಮತ್ತು ಹೆಂಡತಿಯ ಸಹಾಯದಿಂದ ಶವವನ್ನು ಅವರ ಮನೆಯ ಸಮೀಪ ಹೊಲವೊಂದರಲ್ಲಿ ಹೂಳಲಾಯಿತು. ನಂತರ, ಅವರು ಶಾಜಿ ಮಲಪ್ಪುರಂನಲ್ಲಿದ್ದಾರೆ ಎಂದು ಎಲ್ಲರಿಗೂ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT