ದೇಶ

ಕೋವಿಡ್-19 ಲಸಿಕೆಯ ಹೊಸ ನೀತಿಯಲ್ಲಿ ತಾರತಮ್ಯ; ದುರ್ಬಲ ವರ್ಗದವರಿಗೆ ಖಾತರಿ ಇಲ್ಲ: ರಾಹುಲ್ ಗಾಂಧಿ

Srinivas Rao BV

ನವದೆಹಲಿ: ಕೇಂದ್ರ ಸರ್ಕಾರದ ಕೋವಿಡ್-19 ಲಸಿಕೆಯ ಹೊಸ ನೀತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಹೊಸ ನೀತಿಯಲ್ಲಿ ತಾರತಮ್ಯವಿದ್ದು, ದುರ್ಬಲ ವರ್ಗದವರಿಗೆ ಇದರಲ್ಲಿ ಖಾತರಿ ಇಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

18-45 ವರೆಗಿನ ವಯಸಿನವರಿಗೆ ಉಚಿತ ಲಸಿಕೆಗಳು ಇರುವುದಿಲ್ಲ. ಬೆಲೆ ನಿಯಂತ್ರಣವಿಲ್ಲದೇ ಮಧ್ಯವರ್ತಿಗಳ ಪ್ರವೇಶವಾಗಿದೆ. ದುರ್ಬಲ ವರ್ಗದವರಿಗೆ ಲಸಿಕೆಯ ಖಾತರಿ ಇಲ್ಲ. ಭಾರತ ಸರ್ಕಾರದ್ದು ಲಸಿಕೆ ವಿತರಣೆ ಅಲ್ಲ, ಲಸಿಕೆ ತಾರತಮ್ಯ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಮೇ.1 ರಿಂದ 18 ವರ್ಷಗಳ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಖಾಸಗಿ ಆಸ್ಪತ್ರೆಗಳು ಹಾಗೂ ರಾಜ್ಯಗಳು ನೇರವಾಗಿ ಲಸಿಕೆ ಉತ್ಪಾದಕರಿಂದಲೇ ಖರೀದಿಸಬಹುದಾಗಿದೆ.

SCROLL FOR NEXT