ದೇಶ

ಹೆಚ್ಚುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಬೆಂಬಲ, ನೆರವಿನ ಹಸ್ತ ಚಾಚಿದ ಚೀನಾ

Lingaraj Badiger

ಬೀಜಿಂಗ್: ಸದಾ ಗಡಿ ಕ್ಯಾತೆ ತೆಗೆಯುತ್ತಾ ಭಾರತೀಯರ ಕೆಂಗೆಣ್ಣಿಗೆ ಗುರಿಯಾಗುವ ಚೀನಾ, ಕೊರೋನಾ ವೈರಸ್ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಅಗತ್ಯ ನೆರವು ಹಾಗೂ ಬೆಂಬಲ ನೀಡುವುದಾಗಿ ಗುರುವಾರ ಹೇಳಿದೆ.

ಭಾರತದಲ್ಲೆ ಕೊರೋನಾ ವೈರಸ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಚೀನಾದ ಅಧಿಕೃತ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಅವರು, ಕೋವಿಡ್-19 "ಸಾಂಕ್ರಾಮಿಕ ಮಾನವಕುಲದ ಸಾಮಾನ್ಯ ಶತ್ರುವಾಗಿದ್ದು, ಅದರ ವಿರುದ್ಧ ಹೋರಾಡಲು ಅಂತರರಾಷ್ಟ್ರೀಯ ಒಗ್ಗಟ್ಟು ಮತ್ತು ಪರಸ್ಪರ ಸಹಾಯದ ಅವಶ್ಯಕತೆಯಿದೆ" ಎಂದಿದ್ದಾರೆ.

"ಸಾಂಕ್ರಾಮಿಕ ವಿರುದ್ಧದ ವೈದ್ಯಕೀಯ ಸರಬರಾಜುಗಳ ತಾತ್ಕಾಲಿಕ ಕೊರತೆಯೊಂದಿಗೆ ಭಾರತದಲ್ಲಿನ ಇತ್ತೀಚಿನ ಗಂಭೀರ ಪರಿಸ್ಥಿತಿಯನ್ನು ಚೀನಾ ಗಮನಿಸುತ್ತದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತಕ್ಕೆ ಅಗತ್ಯವಾದ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ" ಎಂದು ಅವರು ಹೇಳಿದರು.

2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಾಗ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿ ಭಾರತ ನೆರವು ನೀಡಿತ್ತು. ಇದೀಗ ಭಾರತಕ್ಕೆ ನೆರವು ನೀಡಲು ಸಿದ್ಧ ಎಂದು ಚೀನಾ ಹೇಳಿದೆ.

SCROLL FOR NEXT