ದೇಶ

ಆ್ಯಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ: ಮುಂಬೈ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಸುನಿಲ್ ಮಾನೆ ಬಂಧನ

Srinivasamurthy VN

ಮುಂಬೈ: ಆ್ಯಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸುಖ್ ಹಿರೇನ್ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಮುಂಬೈ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಮಾನೆ ಅವರನ್ನು ಬಂಧಿಸಲಾಗಿದೆ. 

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸುನೀಲ್ ಮಾನೆ ಅವರನ್ನು ಬಂಧಿಸಿದ್ದು, ಮಾನೆ ಮುಂಬೈನ ಕಾಂಡಿವಲಿ ಅಪರಾಧ ಶಾಖೆ ಘಟಕ 11 ರ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಅವರು ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಂಡಿವಲಿ ಅಪರಾಧ ವಿಭಾಗದ ಮಾಜಿ  ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಸುನಿಲ್ ಮಾನೆ ಅವರನ್ನು ಎನ್‌ಐಎ ಮನ್ಸುಖ್ ಹಿರೆನ್ ಸಾವು ಪ್ರಕರಣದಲ್ಲಿ ಬಂಧಿಸಿದೆ.

ಈ ಹಿಂದೆ ಮನ್ಸುಖ್ ಹಿರೆನ್ ಸಾವಿನ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಇದರ ಬೆನ್ನಲ್ಲೇ ಎನ್ಐಎ ಅಧಿಕಾರಿಗಳು ಕಳೆದ ತಿಂಗಳು ಭಯೋತ್ಪಾದನಾ ನಿಗ್ರಹ ದಳದ ಬ್ಲ್ಯಾಕೌಟ್ ಕೇಂದ್ರದಲ್ಲಿ ಸುನಿಲ್ ಮಾನೆ ಅವರನ್ನು ವಿಚಾರಣೆ ನಡೆಸಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಿಲ್ ಮಾನೆ  ಅವರನ್ನು ಎನ್ಐಎ ಬಂಧಿಸಿದೆ.
 

SCROLL FOR NEXT