ಸಂಗ್ರಹ ಚಿತ್ರ 
ದೇಶ

ಮೇ 15ರ ವೇಳೆಗೆ ಭಾರತದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 33 ರಿಂದ 35 ಲಕ್ಷಕ್ಕೇರುವ ಸಾಧ್ಯತೆ: ಐಐಟಿ ವಿಜ್ಞಾನಿಗಳು

ಭಾರತದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಆರ್ಭಟ ಮುಂದುವರೆದಿರುವಂತೆಯೇ ಮೇ ತಿಂಗಳಲ್ಲಿ ಸೋಂಕು ಉತ್ತುಂಗಕ್ಕೇರುವ ಸಾಧ್ಯತೆ ಇದ್ದು, ಮೇ 15ರ ಹೊತ್ತಿಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 33 ರಿಂದ 35 ಲಕ್ಷಕ್ಕೇರುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿಗಳು ಹೇಳಿದ್ದಾರೆ.

ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಆರ್ಭಟ ಮುಂದುವರೆದಿರುವಂತೆಯೇ ಮೇ ತಿಂಗಳಲ್ಲಿ ಸೋಂಕು ಉತ್ತುಂಗಕ್ಕೇರುವ ಸಾಧ್ಯತೆ ಇದ್ದು, ಮೇ 15ರ ಹೊತ್ತಿಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 33 ರಿಂದ 35 ಲಕ್ಷಕ್ಕೇರುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿಗಳು ಹೇಳಿದ್ದಾರೆ.

ಐಐಟಿ ವಿಜ್ಞಾನಿಗಳು ರೂಪಿಸಿದ ಗಣಿತದ ಮಾದರಿ ಪ್ರಕಾರ ಹಾಲಿ ದೈನಂದಿನ ಹೊಸ ಪ್ರಕರಣಗಳನ್ನು ಲೆಕ್ಕಾಚಾರ ಮಾಡಿದರೆ, ಕಳೆದ ಸೆಪ್ಟೆಂಬರ್ ನಲ್ಲಿ ಸುಮಾರು 10 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ಮೇ ತಿಂಗಳ 11 ರಿಂದ 15ರ ಹೊತ್ತಿಗೆ ಭಾರತದಲ್ಲಿನ ಕೋವಿಡ್-19 ಸಕ್ರಿಯ ಪ್ರಕರಣಗಳ  ಸಂಖ್ಯೆ 33-35 ಲಕ್ಷಕ್ಕೇರುವ ಸಾಧ್ಯತೆ ಇದೆ. ಅಂತೆಯೇ ಮೇ ಅಂತ್ಯದ ವೇಳೆಗೆ ಪ್ರಕರಣಗಳ ಸಂಖ್ಯೆ ಕುಸಿಯಬಹುದು ಎಂದು ಕಾನ್ಪುರ ಮತ್ತು ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ 3 ತಿಂಗಳು ನಿರ್ಣಾಯಕ, ಸರ್ಕಾರಗಳು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು
ಮುಂದಿನ 3 ತಿಂಗಳು ಭಾರತಕ್ಕೆ ನಿರ್ಣಾಯಕವಾಗಿದ್ದು, ಮೇ 11 ರಿಂದ 15ರ ನಡುವೆ ಭಾರತದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟ ತಲುಪಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33ರಿಂದ 35 ಲಕ್ಷ ತಲುಪಲಿದೆ. ಇನ್ನೂ ಮುಂದಿನ ಮೂರು ವಾರಗಳ ಕಾಲ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ  ಸಾಗುತ್ತದೆ. ಅಂದಾಜಿನ ಪ್ರಕಾರ ಮೇ ಮಧ್ಯಭಾಗದಲ್ಲಿ ಕೊರೊನಾ ಮೊದಲನೇ ಅಲೆಗಿಂತ ಮೂರು ಪಟ್ಟು ಹೆಚ್ಚಿನ ಪ್ರಕರಣ ದಾಖಲಾಗುತ್ತದೆ. ಕಳೆದ ಸೆಪ್ಟೆಂಬರ್ 17ರಂದು ದೇಶದಲ್ಲಿ 10 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. ಮುಂದಿನ ಮೂರು ವಾರಗಳ ಕಾಲ ಕೊರೊನಾ ಪ್ರಕರಣಗಳ ಸಂಖ್ಯೆ ಕೈಮೀರುವ  ಎಲ್ಲಾ ಲಕ್ಷಣಗಳಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಲಿದೆ.

ಹೀಗಾಗಿ ಈಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ಧತೆ ಮಾಡಿಕೊಳ್ಳಲೇಬೇಕಿದೆ. ಔಷಧಗಳು, ಆರೋಗ್ಯ ಸಲಕರಣೆಗಳು, ಆಸ್ಪತ್ರೆಗಳು ಈ ಎಲ್ಲಾ ವ್ಯವಸ್ಥೆಗಳನ್ನು ಗರಿಷ್ಠ ಮಟ್ಟದಲ್ಲಿ ರೂಪಿಸಬೇಕಿದೆ. ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು  ತೆಲಂಗಾಣದಲ್ಲಿ ಏಪ್ರಿಲ್ 25-30ರ ವೇಳೆಗೆ ಹೆಚ್ಚಿನ ಹೊಸ ಪ್ರಕರಣಗಳು ಕಂಡುಬರಬಹುದು. ಆದರೆ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಈಗಾಗಲೇ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮೇ ತಿಂಗಳ ಮಧ್ಯ ಭಾಗದಲ್ಲಿ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 33 ರಿಂದ 35  ಲಕ್ಷಕ್ಕೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಎಷ್ಟು ವೇಗವಾಗಿ ಏರಿಕೆಯಾಗುತ್ತದೆಯೇ ಅಷ್ಟೇ ವೇಗದಲ್ಲಿ ಇಳಿಕೆಯಾಗುತ್ತದೆ!!
ಇದೇ ವೇಳೆ ವಿಜ್ಞಾನಿಗಳು ಅಭಿಪ್ರಾಯದಂತೆ ಮೇ ತಿಂಗಳಲ್ಲಿ ಕೊರೋನಾ ಸೋಂಕು ಎಷ್ಟು ವೇಗವಾಗಿ ಎರಿಕೆಯಾಗುತ್ತದೆಯೋ ಅಷ್ಟೇ ವೇಗದಲ್ಲಿ ಇಳಿಕೆಯಾಗುವ ಸಾಧ್ಯತೆ ಕೂಡ ಇದೆ. ಮೇ ತಿಂಗಳ ಮಧ್ಯಭಾಗದಲ್ಲಿ ಉತ್ತಂಗಕ್ಕೇರುವ ಸೋಂಕು ಸಾಂಕ್ರಾಮಿಕ ಅದೇ ತಿಂಗಳ ಅಂತ್ಯದಲ್ಲಿ ಗಣನೀಯವಾಗಿ ಕುಸಿತ  ಕಾಣುವ ಸಾಧ್ಯತೆ ಇದೆ. ಮೇ ತಿಂಗಳ ಅಂತ್ಯದ ವೇಳೆ ಹೊಸ ಸೋಂಕಿತರ ಸಂಖ್ಯೆಯಲ್ಲಿ ನಾಟಕೀಯ ಇಳಿಕೆ ಕಂಡುಬರುತ್ತದೆ ಎಂದು ಕಾನ್ಪುರದ ಐಐಟಿ- ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮನೀಂದ್ರ ಅಗ್ರವಾಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT