ದೇಶ

ರಾಜ್ಯದ ಪ್ರತಿಯೊಬ್ಬ ಅರ್ಹ ನಾಗರಿಕರಿಗೂ ಉಚಿತ ಕೋವಿಡ್ ಲಸಿಕೆ: ತೆಲಂಗಾಣ ಸರ್ಕಾರ ಘೋಷಣೆ

Raghavendra Adiga

ಹೈದರಾಬಾದ್: ಕೋವಿಡ್-19 ಲಸಿಕೆಯನ್ನು ರಾಜ್ಯದ ನಾಲ್ಕು ಕೋಟಿ ಜನರಿಗೆ ಯಾವುದೇ ವಯಸ್ಸಿನ ಮ್ಮಿತಿ ಇಲ್ಲದೆ ಉಚಿತವಾಗಿ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರ 2,500 ಕೋಟಿ ರೂ. ವೆಚ್ಚ ಮಾಡಲಿದೆ.

ರಾಜ್ಯಕ್ಕೆ ಬಂದು ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಕೂಡ ಉಚಿತ  ಲಸಿಕೆ ಪಡೆಯಲಿದ್ದಾರೆ. ತೆಲಂಗಾಣದಲ್ಲಿ ಈವರೆಗೆ 35 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

"ಹಣ ಮುಖ್ಯವಲ್ಲ. ಜನರ ಜೀವನ ನಮಗೆ ಮುಖ್ಯವಾಗಿದೆ. ಅದಕ್ಕಾಗಿಯೇ ಎಲ್ಲರಿಗೂ ಉಚಿತ ಕೋವಿಡ್-19 ಲಸಿಕೆ ನೀಡಲು ನಿರ್ಧರಿಸಿದ್ದೇವೆ" ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಘೋಷಿಸಿದರು. ಇದಕ್ಕಾಗಿ ವ್ಯವಸ್ಥೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಿಎಂ ಭಾರತ್ ಬಯೋಟೆಕ್ ಜೊತೆಗೆ ರೆಡ್ಡಿ ಲ್ಯಾಬ್ಸ್ ಮತ್ತಿತರರು ಲಸಿಕೆ ಉತ್ಪಾದನೆಯಲ್ಲಿ ತೊಡಗಿರುವುದರಿಂದ ಲಸಿಕೆ  ಕೊರತೆಯಿಲ್ಲ ಎಂದು ಜೇಳಿದ್ದಾರೆ.

ಏಪ್ರಿಲ್ 19 ರಂದು ಕೋವಿಡ್-19 ಪಾಸಿಟಿವ್ ವರದಿ ಪಡೆದ ನಂತರ ಪ್ರಸ್ತುತ ಹೋಂ ಕ್ಚಾರಂಟೈನ್ ನಲ್ಲಿರುವ ಮುಖ್ಯಮಂತ್ರಿ, ರಾವ್ ಒಮ್ಮೆ ತಾವು ಚೇತರಿಸಿಕೊಂಡ ನಂತರ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಿದ್ದಾರೆ. "ಮುಂದಿನ ಎರಡು ಮೂರು ದಿನಗಳಲ್ಲಿ ನಾನು ಕೋವಿಡ್ ವ್ಯಾಕ್ಸಿನೇಷನ್ ಕುರಿತು ಸಭೆ ನಡೆಸಿ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತೇನೆ" ಎಂದು ಮುಖ್ಯಮಂತ್ರಿ ಹೇಳಿದರು.

SCROLL FOR NEXT