ದೇಶ

ಸೋಮವಾರ ರಾತ್ರಿ ದೆಹಲಿ ತಲುಪಲಿರುವ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು!

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಗೆ ಸುಮಾರು 70 ಟನ್ ಜೀವ ರಕ್ಷಕ ಅನಿಲವನ್ನು ಸಾಗಿಸುತ್ತಿರುವ  ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಭಾನುವಾರ ರಾತ್ರಿ ರಾಯಘಡದ ಜಿಂದಾಲ್ ಸ್ಟೀಲ್ ವರ್ಕ್ಸ್ ಪ್ಲಾಂಟ್ ನಿಂದ ನಿರ್ಗಮಿಸಲಿದೆ ಎಂದು ರೈಲ್ವೆ ಮಂಡಲಿ ಅಧ್ಯಕ್ಷ ಸುನೀಶ್ ಶರ್ಮಾ ತಿಳಿಸಿದ್ದಾರೆ.

ನಾಲ್ಕು ಅಕ್ಸಿಜನ್ ಟ್ಯಾಂಕರ್ ಗಳನ್ನು ಸಾಗಿಸುತ್ತಿರುವ ಈ ರೈಲು ಸೋಮವಾರ ರಾತ್ರಿ ದೆಹಲಿಗೆ ತಲುಪಲಿದೆ. ಅಂಗುಲ್, ಕಾಳಿಂಗ ನಗರ, ರೂರ್ಕೆಲಾ ಮತ್ತು ರಾಯಘಡದಿಂದ ದೆಹಲಿ ಮತ್ತು ಎನ್ ಸಿಆರ್ ವಲಯಕ್ಕೆ ಮೆಡಿಕಲ್ ಆಕ್ಸಿಜನ್  ಸಾಗಿಸಲು 
ರೈಲ್ವೆ ಯೋಜನೆ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ಹಾಗೂ ಅದರ ಸುತ್ತಮುತ್ತ ಆಕ್ಸಿಜನ್ ಕೊರತೆಯಿಂದ ಜನ ಪಡುತ್ತಿರುವ ಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ವೇದಿಕೆಗಳಲ್ಲಿ ಹತಾಶ ಸಂದೇಶಗಳು  ಹರಿದಾಡುತ್ತಿದ್ದು, ದೇಶದಲ್ಲಿ ಆಕ್ಸಿಜನ್ ಗೆ ತೀವ್ರ ಬೇಡಿಕೆ ಇರುವ ಕಾರಣದಿಂದ ಅಕ್ಸಿಜನ್  ಎಕ್ಸ್ ಪ್ರೆಸ್ ರೈಲನ್ನು ಓಡಿಸಲು ರೈಲ್ವೆ ನಿರ್ಧರಿಸಿದೆ.

SCROLL FOR NEXT