ದೇಶ

ನಕಲಿ ಟ್ವಿಟರ್ ಖಾತೆ: ಸಿಜೆಐ ಎನ್.ವಿ. ರಮಣ ಪೊಲೀಸ್ ದೂರು ದಾಖಲು

Nagaraja AB

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ಅವರ ಹೆಸರಿನ ಟ್ವಿಟರ್ ಖಾತೆಯಲ್ಲಿ ನಕಲಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಶನಿವಾರವಷ್ಟೇ  ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿರುವ ಎನ್.ವಿ. ರಮಣ ಟ್ವಿಟರ್ ಮತ್ತಿತರ ಯಾವುದೇ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹೊಂದಿಲ್ಲ.

ಎನ್.ವಿ. ರಮಣ ಹೆಸರಿನ ಖಾತೆ ಡಿಲಿಟ್ ಆಗಿದೆ. ಆದರೆ, ಅದರಲ್ಲಿ ಬರೆದಿರುವುದು ಇನ್ನೂ ಉಳಿದಿದ್ದು, ಈವರೆಗೂ 98 ಬಾರಿ ಟ್ವೀಟ್ ಮಾಡಲಾಗಿದೆ. ಅಳಿಸಲಾದ ಟ್ವೀಟ್ ನಲ್ಲಿ ಅಜಿತ್ ದೋವಲ್ ಅವರ ರಾಜತಾಂತ್ರಿಕತೆಯ ಕಾರಣದಿಂದಾಗಿ, ಭಾರತಕ್ಕೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು ಯುಎಸ್ ನಿರ್ಧರಿಸಿದೆ ಎಂದು ಬರೆಯಲಾಗಿದೆ.

ಶನಿವಾರವಷ್ಟೇ ದೇಶದ 48ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ರಮಣ ಅಧಿಕಾರ ಸ್ವೀಕರಿಸಿದ್ದರು. 

SCROLL FOR NEXT