ಜೈಪುರ: ರಜಪೂತ ಸಮುದಾಯದ ಮುಖಂಡ ಗಿರಿರಾಜ್ ಸಿಂಗ್ ಲೋಟಾವರ್ ಗುರುವಾರ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
60 ವರ್ಷದ ಲೋಟಾವರ್ ಅವರು ರಾಜಸ್ಥಾನದ ಆರೋಗ್ಯ ವಿವಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಲೋಟಾವರ್ ವಿಧಿವಶರಾಗಿದ್ದಾರೆ ಎಂದು ರಜಪೂತ್ ಸಭಾ ಭವನ್ ತಿಳಿಸಿದೆ.
ಗಿರಿರಾಜ್ ಸಿಂಗ್ ಶ್ರೀ ರಜಪೂತ್ ಸಭಾದ ಅಧ್ಯಕ್ಷರಾಗಿದ್ದರು, ಗಿರಿರಾಜ್ ಸಿಂಗ್ ಅವರ ನಿಧನಕ್ಕೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತ್ಸಾರ ಸಂತಾಪ ಸೂಚಿಸಿದ್ದಾರೆ.