ದೇಶ

18-44 ವಯಸ್ಸಿನವರಿಗೆ ಕೋವಿಡ್-19 ಲಸಿಕೆ ಅಭಿಯಾನದಿಂದ, ರಕ್ತ ನಿಧಿಗೆ ಕೊರತೆ ಸಾಧ್ಯತೆ

Srinivas Rao BV

ಮೇ.1 ರಿಂದ 18-44 ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ದೇಶದ ಹಲವು ಭಾಗಗಳಲ್ಲಿ ಚಾಲನೆ ದೊರೆಯಲಿದ್ದು, ಅಭಿಯಾನದ ನೆರಳಿನಲ್ಲೇ ರಕ್ತ ನಿಧಿಗೆ ಕೊರತೆ ಉಂಟಾಗುವ ಭೀತಿಯೂ ಮೂಡಿದೆ. 

ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ (ಎನ್ ಬಿಟಿಸಿ) ಲಸಿಕೆಯ ಡೋಸ್ ಪಡೆದವರಿಂದ 28 ದಿನಗಳ ವರೆಗೆ ರಕ್ತ ಪಡೆಯಕೂಡದೆಂದು ಹೇಳಿದೆ. 

ರಕ್ತ ದಾನಿಗಳ ಪೈಕಿ ಅತಿ ಹೆಚ್ಚಿನವರು 18-44 ವಯಸ್ಸಿನ ಮಂದಿಯಾಗಿದ್ದು, ಈ ವಯಸ್ಸಿನವರಿಗೆ ಮೇ.1 ರಿಂದ ಲಸಿಕೆ ಪಡೆಯುವ ಅರ್ಹತೆ ಲಭ್ಯವಿದೆ. ಎರಡನೇ ಡೋಸ್ ಲಸಿಕೆ ಪಡೆಯಬೇಕೆನ್ನುವವರು ಕನಿಷ್ಟ 56 ದಿನಗಳ ಕಾಲ ರಕ್ತ ದಾನ ಮಾಡುವಂತಿಲ್ಲ ಎಂದು ತಮಿಳುನಾಡು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ನಿರ್ದೇಶಕ ದೀಪಕ್ ಜಾಕೋಬ್ ಹೇಳಿದ್ದಾರೆ. 

ಲಸಿಕೆ ಪಡೆದ ನಂತರ ರಕ್ತದಾನಕ್ಕೆ ಅವಕಾಶವಿಲ್ಲದಿರುವುದರಿಂದ ಲಸಿಕೆ ಪಡೆಯುವುದಕ್ಕೂ ಮುನ್ನ ಸಾಧ್ಯವಾದಷ್ಟೂ ರಕ್ತದಾನಕ್ಕೆ ತಮಿಳುನಾಡು ರಾಜ್ಯ ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ ಉತ್ತೇಜಿಸಿದೆ. ಒಂದು ವೇಳೆ ರಕ್ತದ ಕೊರತೆ ಎದುರಾದಲ್ಲಿ ಅದು ತಾಯಿಯ ಮರಣ ಪ್ರಮಾಣವನ್ನು ಏರಿಕೆ ಮಾಡುವ ಅಪಾಯವಿರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ರಕ್ತದಾನಿಗಳನ್ನು ನಿರುತ್ಸಾಹಗೊಳಿಸುವುದೇ ಲಸಿಕೆ ಪಡೆಯುವಂತೆ ಮಾಡುವುದು ಸವಾಲಿನ ಕೆಲಸ ಹಿರಿಯ ವೈದ್ಯರು ಹೇಳಿದ್ದಾರೆ. 

SCROLL FOR NEXT