ಶತಾಯುಷಿ ಓಟಗಾರ್ತಿ ಮನ್‌ ಕೌರ್‌ 
ದೇಶ

ಶತಾಯುಷಿ ಚಂಡೀಗಡದ ಅದ್ಬುತ ಸರ್ದಾರ್ಣಿ ಮನ್‌ ಕೌರ್‌ ನಿಧನ, ಉಪ ರಾಷ್ಟ್ರಪತಿ ನಾಯ್ಡು ಸಂತಾಪ

ಭಾರತೀಯ ಟ್ರ್ಯಾಕ್ ಅಂಡ್‌ ಫೀಲ್ಡ್ ಶತಾಯುಷಿ ಕ್ರೀಡಾಪಟು, ಚಂಡೀಗಡದ ಅದ್ಭುತ ಸರ್ದಾರ್ಣಿ ಎಂದೇ ಹೆಸರಾಗಿದ್ದ ಮನ್‌ ಕೌರ್‌ (105) ವಿಧಿವಶರಾಗಿದ್ದು, ಅವರ ಸಾವಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕಂಬನಿ ಮಿಡಿದಿದ್ದಾರೆ.

ಚಂಡೀಗಢ: ಭಾರತೀಯ ಟ್ರ್ಯಾಕ್ ಅಂಡ್‌ ಫೀಲ್ಡ್ ಶತಾಯುಷಿ ಕ್ರೀಡಾಪಟು, ಚಂಡೀಗಡದ ಅದ್ಭುತ ಸರ್ದಾರ್ಣಿ ಎಂದೇ ಹೆಸರಾಗಿದ್ದ ಮನ್‌ ಕೌರ್‌ (105) ವಿಧಿವಶರಾಗಿದ್ದು, ಅವರ ಸಾವಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕಂಬನಿ ಮಿಡಿದಿದ್ದಾರೆ.

ಪಿತ್ತಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಮೊಹಾಲಿಯ ಶುದ್ಧಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಶನಿವಾರ ಕೊನೆಯುಸಿರೆಳೆದಿದ್ದಾರೆ. ಈ ವಿಷಯವನ್ನು ಪುತ್ರ ಗುರುದೇವ್ ಸಿಂಗ್ ದೃಢಪಡಿಸಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂದು ಸಾಭೀತುಪಡಿಸಿದ್ದ ಅದ್ಭುತ  ಆಟಗಾರ್ತಿಯ ಸಾವಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರು ಹಾಗೂ ಆಟಗಾರರು ಸಂತಾಪ ಸೂಚಿಸಿದ್ದಾರೆ.

ಶತಮಾನೋತ್ಸವದ ಓಟಗಾರ್ತಿಯ ನಿಧನದಿಂದ ದುಃಖಿತರಾಗಿದ್ದೇವೆ.  ಶ್ರೀಮತಿ ಮನ್ ಕೌರ್ ಜೀ. "ಚಂಡೀಗಢದ ಮಿರಾಕಲ್ ಮಾಮ್" ಎಂದೇ ಖ್ಯಾತಿ ಪಡೆದಿದ್ದರು. ಮನ್ ಕೌರ್ ತಮ್ಮ 93 ನೇ ವಯಸ್ಸಿನಲ್ಲಿ ಓಡುವ ಮೂಲಕ ನಾರಿಶಕ್ತಿಯ ಮೂರ್ತರೂಪವಾಗಿದ್ದರು. ಅವರ ನಿಧನದಿಂದ ನಾನು ತುಂಬಾ  ದುಃಖಿತನಾಗಿದ್ದೇನೆ. ಅವರ ಕುಟುಂಬಸ್ಥರಿಗೆ ಆಕೆಯ ಅಗಲಿಕೆಯ ನೋವು ತಡೆಯು ಶಕ್ತಿ ಆ ಭಗವಂತ ನೀಡಲಿ.. ಓಂ ಶಾಂತಿ ! ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ.

2017ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಗೇಮ್ಸ್‌ನಲ್ಲಿ 100 ಮೀಟರ್‌ ಗೆಲುವು ಸಾಧಿಸಿದ್ದ ಶತಾಯುಷಿ ಓಟಗಾರ್ತಿ ಮನ್ ಕೌರ್ 1916, ಮಾರ್ಚ್ 1,ರಂದು ಜನಿಸಿದ್ದರು. ವಾಸ್ತವವಾಗಿ ಮನ್ ಕೌರ್ ಅವರು 93 ವರ್ಷ ವಯಸ್ಸಿನವರೆಗೂ ಅಥ್ಲೆಟಿಕ್ಸ್ ಆರಂಭಿಸಲಿಲ್ಲ. 2016 ರಲ್ಲಿ, ಅಮೆರಿಕನ್‌  ಮಾಸ್ಟರ್ಸ್ ಗೇಮ್ಸ್‌ನಲ್ಲಿ ಅತ್ಯಂತ ವೇಗವಾಗಿ ಓಡುವ ಶತಾಯುಷಿಯಾಗಿ ಹೊರಹೊಮ್ಮಿದ್ದರು. 100 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಆವರು ವಿಶ್ವ ದಾಖಲೆಗಳನ್ನು ಹೊಂದಿದ್ದರು.

ಅಲ್ಲದೆ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹಲವು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 2019 ರಲ್ಲಿ, ಪೋಲೆಂಡ್‌ನಲ್ಲಿ ಷಾಟ್‌ ಪುಟ್‌, 60 ಮೀ ಸ್ಪ್ರಿಂಟ್, 200 ಮೀ, ಜಾವೆಲಿನ್ ಥ್ರೋ ನಾಲ್ಕು ಸ್ಪರ್ಧೆಗಳಲ್ಲಿ ಕೌರ್‌ ಗೆಲುವು ಸಾಧಿಸಿದ್ದು ವಿಶೇಷ. ಕೌರ್ ಅವರ ಪುತ್ರ ಗುರುದೇವ್ ಸಿಂಗ್ ಖುದ್ದು  ತಾಯಿಗೆ ತರಬೇತಿಗಾರರಾಗಿದ್ದರು. ಮನ್ ಕೌರ್ ಗೆ ಇಬ್ಬರು ಪತ್ರರು, ಓರ್ವ ಪುತ್ರಿ. 104 ನೇ ವಯಸ್ಸಿನಲ್ಲಿ, ಕೇಂದ್ರ ಸರ್ಕಾರ 2020 ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಾರಿ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

SCROLL FOR NEXT