ದೇಶ

ಅಸ್ಸಾಂ-ಮಿಜೊರಾಮ್ ಗಡಿಯಲ್ಲಿ ನಿರ್ಬಂಧ ಮುಂದುವರಿಕೆ: ಕೇಂದ್ರ ಪಡೆಗಳು ಜಾಗೃತ

Srinivas Rao BV

ಗುವಾಹಟಿ: ಗಡಿ ವಿವಾದದ ಹಿನ್ನೆಲೆಯಲ್ಲಿ ಅಸ್ಸಾಂ-ಮಿಜೊರಾಮ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಸತತ 6 ನೇ ದಿನವೂ ಮುಂದುವರೆದಿದ್ದು, ಟ್ರಕ್, ಅತ್ಯಗತ್ಯ ಸೇವೆಗಳನ್ನು ಒದಗಿಸುವ ಅಂತಾರಾಜ್ಯ ವಾಹನಗಳ ಸಂಚಾರವೂ ಸ್ಥಗಿತಗೊಂಡಿದೆ. 

ಲೈಲಾಪುರದಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸ್ಥಿತಿ ವಿಷಮವಾಗಿದ್ದು, ಹಿಂಸಾಚಾರಕ್ಕೆ ತಿರುಗಿದೆ. 

ಗಡಿ ಪ್ರದೇಶದಾದ್ಯಂತ ಸಿಆರ್ ಪಿಎಫ್ ಟ್ರೂಪ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು ರಾಷ್ಟ್ರೀಯ ಹೆದ್ದಾರಿ-306 ರಲ್ಲಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ. 

ಈ ನಡುವೆ ಅಸ್ಸಾಂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಜಯಂತ್ ಮಲ್ಲಾ ಬರೂಹ ಅವರು ಹಿಂಸಾಚಾರದಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ನಿವಾಸಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಸಿಬ್ಬಂದಿಗಳ ಶೌರ್ಯಕ್ಕೆ ನಮನ ಸಲ್ಲಿಸಿದ್ದಾರೆ. ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರಿಲ್ಲವಾದರೂ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಅಸ್ಸಾಂ ನ ಬರಾಕ್ ಕಣಿವೆಯ ಅಧಿಕಾರಿಗಳು ಹೇಳಿದ್ದಾರೆ. 

ಕೋವಿಡ್-19 ನಿಭಾಯಿಸಲು ಅಗತ್ಯವಿರುವ ಸರಕುಗಳನ್ನು ಹೊತ್ತು ಸಾಗಿರುವ ಟ್ರಕ್ ಗಳೂ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತೊಯ್ದಿರುವ ಟ್ರಕ್ ಗಳು ಕಬುಗಂಜ್ ಧೊಲಾಯ್ ಬಳಿ ಸ್ಥಗಿತಗೊಂಡಿದ್ದು ಮುಂದೆ ಸಂಚರಿಸಲು ಕಾಯುತ್ತಿವೆ. 

ಮಿಜೊರಾಮ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಘಟಿತ ರಸ್ತೆ ತಡೆಯನ್ನು ಈಗ ನಿವಾರಿಸಲಾಗಿದ್ದು ಯಾವುದೇ ಗುಂಪೂ ಸಹ ರಸ್ತೆ ತಡೆ, ಟ್ರಕ್ ಅಥವಾ ಇನ್ನಿತರ ವಾಹನಗಳನ್ನು ತಡೆಯುತ್ತಿಲ್ಲ ಆದರೆ ನೊಂದ ನಾಗರಿಕರು ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ. ವಾಣಿಜ್ಯ ವಾಹನಗಳು ಮಾತ್ರವೇ ಅಪಾಯವನ್ನೂ ಲೆಕ್ಕಿಸದೇ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT