ದೇಶ

ಭಾರತೀಯ ಭಾಷೆಗಳ ಸಂರಕ್ಷಣೆ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದನೆ

Srinivasamurthy VN

ನವದೆಹಲಿ: ಭಾರತೀಯ ಭಾಷೆಗಳನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸಲು ಜಂಟಿ ಸಮನ್ವಯದ ಪ್ರಯತ್ನ ಬಹಳ ಅಗತ್ಯ ಎಂದು ಉಪರಾಷ್ಟಪತಿ ಎಂ.ವೆಂಕಯ್ಯಕಯ್ಯ ನಾಯ್ಡು ಒತ್ತಿ ಹೇಳಿದ್ದಾರೆ.

ಮಾತೃಭಾಷೆಗಳ ಸಂರಕ್ಷಣೆ ಕುರಿತು ಇಂದು ಆಯೋಜಿಸಲಾಗಿದ್ದ ವಿಚಾರ ಸಂಕಿರಣ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಉಪರಾಷ್ಟ್ರಪತಿ, ನಮ್ಮ ಭಾಷೆಗಳ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಜನಾಂದೋಲನ ಅಗತ್ಯ ಎಂದರು.

ಭಾಷೆಗಳನ್ನು ಸಮೃದ್ಧಗೊಳಿಸುವಲ್ಲಿ ಅನುವಾದ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು, ಭಾರತೀಯ ಭಾಷೆಗಳ ಅನುವಾದ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಿಸಲು ಮತ್ತಷ್ಟು ಪ್ರಯತ್ನಗಳಾಗಬೇಕು ಎಂದು ಕರೆ ನೀಡಿದರು.

ಗ್ರಾಮೀಣ ಪ್ರದೇಶಗಳ ವಿಶಿಷ್ಟ ಮತ್ತು ದೇಸಿ ಪದಗಳನ್ನು ಸಂಗ್ರಹಿಸಿ ಸಂರಕ್ಷಿಸುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ ಅವರು, ಗ್ರಾಮೀಣ ಭಾಗದಲ್ಲಿ ಬಳಕೆಯಲ್ಲಿದ್ದ ಅಳಿವಿನಂಚಿನಲ್ಲಿರುವ ಪದಗಳನ್ನು ಕ್ರೋಢಿಕರಿಸುವಂತೆಯೂ ಅವರು ಸಲಹೆ ನೀಡಿದರು.
 

SCROLL FOR NEXT