ದೇಶ

ದೆಹಲಿಯಲ್ಲಿ ಹಿರಿಯ ನಾಯಕರಾದ ಲಾಲು ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಭೇಟಿ

Lingaraj Badiger

ನವದೆಹಲಿ: ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಮತ್ತು ಸಮಾಜವಾದಿ ಪಕ್ಷದ(ಎಸ್‌ಪಿ) ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಸೋಮವಾರ ದೆಹಲಿಯಲ್ಲಿ ಭೇಟಿಯಾದರು.

ಸಭೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಯಾದವ್ ಕೂಡ ಇದ್ದರು.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಲಾಲು, "ದೇಶದ ಹಿರಿಯ ಸಮಾಜವಾದಿ ಮಿತ್ರ ಶ್ರೀ ಮುಲಾಯಂ ಸಿಂಗ್‌ಜಿಯವರನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದ್ದೇವೆ. ನಮಗೆ ಸಾಮಾನ್ಯ ಕಾಳಜಿ ಮತ್ತು ರೈತರು, ಅಸಮಾನತೆ, ಬಡವರು ಮತ್ತು ನಿರುದ್ಯೋಗಿಗಳ ಪರ ನಮ್ಮ ಹೋರಾಟ" ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಸಭೆಯ ಚಿತ್ರಗಳನ್ನು ಟ್ವೀಟ್ ಮಾಡಿರುವ ಲಾಲು, "ಇಂದು ದೇಶಕ್ಕೆ ಸಮಾನತೆ ಮತ್ತು ಸಮಾಜವಾದದ ಅವಶ್ಯಕತೆಯಿದೆ. ಬಂಡವಾಳಶಾಹಿ ಮತ್ತು ಕೋಮುವಾದವಲ್ಲ" ಎಂದಿದ್ದಾರೆ.

ಅಖಿಲೇಶ್ ಯಾದವ್ ಕೂಡ ಭೇಟಿಯ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. 

ರಾಷ್ಟ್ರ ರಾಜಧಾನಿಯಲ್ಲಿ ಈ ಸಭೆ ನಡೆದಿದೆ ಎಂದು ಎರಡೂ ಪಕ್ಷಗಳ ಮೂಲಗಳು ತಿಳಿಸಿವೆ. 

ಹಿಂದಿನ ದಿನ, ಅಖಿಲೇಶ್ ಯಾದವ್ ಲೋಕಸಭಾ ಕಲಾಪಕ್ಕೆ ಹಾಜರಾಗಿದ್ದರು.

SCROLL FOR NEXT