ದೇಶ

8 ರಾಜ್ಯಗಳಲ್ಲಿ ಕೋವಿಡ್-19 "ಪುನರುತ್ಪಾದಕ ಸಂಖ್ಯೆ" 1 ಕ್ಕಿಂತ ಹೆಚ್ಚು: ಕೇಂದ್ರ 

Srinivas Rao BV

ನವದೆಹಲಿ: 8 ರಾಜ್ಯಗಳಲ್ಲಿ ಕೋವಿಡ್-19 ಪುನರುತ್ಪಾದಕ ಸಂಖ್ಯೆ 1 ಕ್ಕಿಂತ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಭಾರತದಲ್ಲಿ ಮೂರು ತಿಂಗಳಲ್ಲೇ ಮೊದಲ ಬಾರಿಗೆ ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಶೇ.2 ಕ್ಕೆ ಕುಸಿದಿದ್ದು,  8 ರಾಜ್ಯಗಳಲ್ಲಿ  ಆರ್ ವ್ಯಾಲ್ಯೂ ಜೊತೆಗೆ ಘಾತೀಯ ಬೆಳವಣಿಗೆ 1 ಕ್ಕಿಂತ ಹೆಚ್ಚಿರುವುದು ಆತಂಕ ಮೂಡಿಸಿದೆ. 

ದೇಶದ ಒಟ್ಟಾರೆ ಆರ್ ಫ್ಯಾಕ್ಟರ್ 1.2 ರಷ್ಟಿದ್ದು ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಷ್ಟೇ ಇದೆ. ಓರ್ವ ಸೋಂಕಿತ ವ್ಯಕ್ತಿಯಿಂದ ಹರಡುವ ಸೋಂಕಿನಿಂದ ಎಷ್ಟು ಮಂದಿ ಸೋಂಕಿತರಾಗುತ್ತಾರೆ ಎಂಬುದಕ್ಕೆ ಆರ್ ಫ್ಯಾಕ್ಟರ್ ಎನ್ನಲಾಗುತ್ತದೆ. ಓರ್ವ ಸೋಂಕಿತ ಒಂದಕ್ಕಿಂತ ಹೆಚ್ಚು ಮಂದಿಗೆ ಸೋಂಕು ಹರಡಿಸಬಹುದಾಗಿರುವುದನ್ನು ಆರ್ ಫ್ಯಾಕ್ಟರ್ ಎನ್ನಲಾಗುತ್ತದೆ. 

ಆರ್ ವ್ಯಾಲ್ಯೂ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಲಕ್ಷದ್ವೀಪ, ತಮಿಳುನಾಡು, ಮಿಜೊರಾಮ್, ಕರ್ನಾಟಕಗಳಲ್ಲಿ 1.2 ಕ್ಕಿಂತ ಹೆಚ್ಚಿದೆ, ಕೆಲವೊಂದು ರಾಜ್ಯಗಳಲ್ಲಿ ಆರ್ ಫ್ಯಾಕ್ಟರ್ ಹೆಚ್ಚಳವಾಗುತ್ತಿರುವುದರ ಬಗ್ಗೆ ಆತಂಕವಿದೆ. ವೈರಾಣು ಪ್ರಸರಣ ವಿಸ್ತರಿಸುತ್ತಿದೆ. ಅದನ್ನು ತಡೆಗಟ್ಟಬೇಕು ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ. 

SCROLL FOR NEXT