ದೇಶ

ರಾಜ್ಯಸಭೆಯ ಉತ್ಪಾದಕತೆ ಮೂರನೇ ವಾರದಲ್ಲಿ ಏರಿಕೆ

Srinivas Rao BV

ನವದೆಹಲಿ: ಸಂಸತ್ ಮುಂಗಾರು ಅಧಿವೇಶನದ ರಾಜ್ಯಸಭೆಯ ಕಲಾಪ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ಮೊದಲ ಎರಡು ವಾರಗಳಲ್ಲಿ ಪೋಲಾಗಿತ್ತು. ಆದರೆ ಮೂರನೇ ವಾರದಲ್ಲಿ ಉತ್ಪಾದಕತೆ ಹೆಚ್ಚಿದೆ. ರಾಜ್ಯಸಭೆ ಕಲಾಪದ ಉತ್ಪಾದಕತೆ ಮೂರನೇ ವಾರದಲ್ಲಿ ಶೇ.24.2 ರಷ್ಟು ಏರಿಕೆ ಕಂಡಿದೆ. 

ರಾಜ್ಯಸಭೆ ಕಾರ್ಯದರ್ಶಿಗಳು ತಿಳಿಸಿರುವ ಮಾಹಿತಿಯ ಪ್ರಕಾರ ಮೂರನೇ ವಾರದಲ್ಲಿ 8 ಮಸೂದೆಗಳು ಅಂಗೀಕಾರಗೊಂಡಿದ್ದು. 17 ರಾಜಕೀಯ ಪಕ್ಷಗಳ 68 ರಾಜ್ಯಸಭೆ ಸದಸ್ಯರು ಈ 8 ಮಸೂದೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ

ಜು.19 ರಿಂದ ಈ ವರೆಗೂ, ಪ್ರತಿಭಟನೆಯ ಪರಿಣಾಮ 60 ಗಂಟೆಗಳ ಅವಧಿಯಲ್ಲಿ 78 ಗಂಟೆಗಳ ಅವಧಿ ಪೋಲಾಗಿದೆ. 197 ಶೂನ್ಯವೇಳೆ ಅವಧಿ ಹಾಗೂ 153 ವಿಶೇಷ ಅವಧಿಗಳು ಪೋಲಾಗಿವೆ. 

ಪೆಗಾಸಸ್ ಗೂಢಚರ್ಯೆ ಹಗರಣ ಹಾಗೂ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಿರಂತರ ಪ್ರತಿಭಟನೆ ನಡೆಸುತ್ತಿದ್ದರ ಪರಿಣಾಮ ಅಧಿವೇಶನದ ಪ್ರಾರಂಭದಿಂದಲೂ ಸಂಸತ್ ನ ಉಭಯ ಸದನಗಳ ಕಲಾಪಗಳೂ ವ್ಯರ್ಥವಾಗುತ್ತಿದೆ. 

ಪ್ರತಿಪಕ್ಷಗಳ ನಡೆಯನ್ನು ತೀವ್ರವಾಗಿ ಟೀಕಿಸಿದ್ದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ನಡೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅವಮಾನ ಎಂದು ಹೇಳಿದ್ದಾರೆ. 

SCROLL FOR NEXT