ನೀರಜ್ ಚೋಪ್ರಾ 
ದೇಶ

ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ನೆರವಾಗಿದ್ದ ಒಡಿಶಾ ಸರ್ಕಾರ!

ನೀರಜ್ ಚೋಪ್ರಾ ಟೊಕಿಯೋ ಒಲಂಪಿಕ್ಸ್ ನ  ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದು ಭಾರತೀಯರಲ್ಲಿ ಅತೀವ ಸಂತಸ ಮೂಡಿಸಿತ್ತು. 

ಭುವನೇಶ್ವರ: ನೀರಜ್ ಚೋಪ್ರಾ ಟೊಕಿಯೋ ಒಲಂಪಿಕ್ಸ್ ನ  ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದು ಭಾರತೀಯರಲ್ಲಿ ಅತೀವ ಸಂತಸ ಮೂಡಿಸಿತ್ತು. 

ಚೋಪ್ರಾ ಹಾಗೂ ಅವರೊಂದಿಗೆ ಜಾವೆಲಿನ್ ಅಭ್ಯಾಸದಲ್ಲಿ ತೊಡಗಿದ್ದ ಇತರ ಅಥ್ಲೀಟ್ ಗಳಿಗೆ ಲಾಕ್ ಡೌನ್ ಸಮಯದಲ್ಲಿ ಹಲವಾರು ಸಂಕಷ್ಟಗಳು ಎದುರಾಗಿತ್ತು. ಆದರೆ ಅವೆಲ್ಲವನ್ನೂ ಮೀರಿ ಅಭ್ಯಾಸದಲ್ಲಿ ತೊಡಗಿಕೊಳ್ಳುವುದಕ್ಕೆ ಸಹಕಾರಿಯಾಗಿದ್ದು ಒಡಿಶಾ! 

ರಾಷ್ಟ್ರೀಯ ಜಾವೆಲಿನ್ ತಂಡಕ್ಕೆ ಕಳೆದ ವರ್ಷ ಕೋವಿಡ್-19 ಲಾಕ್ ಡೌನ್ ಪರಿಣಾಮ ಅಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವುದಕ್ಕೆ ತೀವ್ರ ತೊಂದರೆ ಉಂಟಾಗಿತ್ತು. 

ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಸಮಯ ಸನ್ನಿಹಿತವಾಗುತ್ತಿದ್ದಾಗ ಅಭ್ಯಾಸ ಪ್ರಮುಖವಾಗಿತ್ತು ಆದರೆ ಅದಕ್ಕಾಗಿ ಸುರಕ್ಷಿತ ಪ್ರದೇಶ ಹುಡುಕುವುದು ಸವಾಲಿನ ಸಂಗತಿಯಾಗಿತ್ತು. ಈ ಹಂತದಲ್ಲಿ ಕಳಿಂಗ ಸ್ಟೇಡಿಯಂ ನಲ್ಲಿ ವಿಶೇಷ ಜಾವೆಲಿನ್ ಥ್ರೋ ಗಾಗಿ ಕ್ಯಾಂಪ್ ಆಯೋಜಿಸಲು ಒಡಿಶಾ ಸರ್ಕಾರಕ್ಕೆ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಮನವಿ ಮಾಡಿತ್ತು. 

ಒಡಿಶಾ ಸರ್ಕಾರ ಚೋಪ್ರಾ ಹಾಗೂ ಸಹ ಕ್ರೀಡಾಪಟುಗಳಿಗೆ ಹಾಗೂ ಅವರ ಬೆಂಬಲಿಗ ಸಿಬ್ಬಂದಿಗಳಿಗೆ ಅಭ್ಯಾಸಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿತ್ತು. 

ಸರ್ಕಾರ ಕಲ್ಪಿಸಿದ್ದ ವ್ಯವಸ್ಥೆಗೆ ಅಪಾರ ತೃಪ್ತಿಗೊಂಡ ಜಾವೆಲಿನ್ ಥ್ರೋ ಅಥ್ಲೀಟ್ ಗಳ ತಂಡ "ಇಲ್ಲಿನ ಮೂಲಸೌಕರ್ಯ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿತ್ತು. ಒಲಂಪಿಕ್ಸ್ ಗೂ ಮುನ್ನ ಅತ್ಯಂತ ಗುಣಮಟ್ಟದ ಸಮಯ ಲಭ್ಯವಾಗಿ ಒಲಂಪಿಕ್ಸ್ ಗೆ ಆಯ್ಕೆಯಾಗಲು ಸಹಕಾರಿಯಾಯಿತು ಎಂದು ಭುವನೇಶ್ವರದಿಂದ ತೆರಳುವುದಕ್ಕೂ ಮುನ್ನ ಜಾವೆಲಿನ್ ಚಾಂಪಿಯನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದರು. 

ಒಡಿಶಾ ಸರ್ಕಾರದ ಕ್ರೀಡಾ ಹಾಗೂ ಯುವಜನ ಇಲಾಖೆ ಸುರಕ್ಷತೆಯ ಜೊತೆಗೆ ತರಬೇತಿ ನೀಡುವ ಎಸ್ಒಪಿಯನ್ನು ಹೊಂದಿದೆ. ಚೋಪ್ರಾ ಅವರಿಗೆ ಡಿಸೆಂಬರ್ 2020 ರಿಂದ ಫೆಬ್ರವರಿ 2021 ತರಬೇತಿ ಕ್ಯಾಂಪ್ ಸುಸೂತ್ರವಾಗಿ ನಡೆದಿತ್ತು.  ಚೋಪ್ರಾಗೆ ಒಡಿಶಾದಲ್ಲಿ ಹಳೆಯ ನೆನಪುಗಳೂ ಇದ್ದು 2017 ರಲ್ಲಿ ಇದೇ ಕಳಿಂಗ ಕ್ರೀಡಾಂಗಣದಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ 2017 ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT