ದೇಶ

ಯುಪಿ ಆಸೆಂಬ್ಲಿ ಚುನಾವಣೆ ಪರಿಗಣಿಸಿ ನೂತನ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು- ಬಿಜೆಪಿ ಮುಖಂಡ

Nagaraja AB

ಬಲ್ಲಿಯಾ: ನೂತನ ಮೂರು ಕೃಷಿ ಕಾನೂನುಗಳ ವಿರುದ್ಧದ ರೈತರ ಹೋರಾಟಕ್ಕೆ ಬಿಜೆಪಿ ಮುಖಂಡರೊಬ್ಬರು ಬೆಂಬಲ ವ್ಯಕ್ತಪಡಿಸಿದ್ದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅವುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರೈತರ ಬೇಡಿಕೆ ಸರಿಯಾಗಿಯೇ ಇದೆ.  ರೈತರ ಆಕ್ರೋಶ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಮೋದಿ ಸರ್ಕಾರ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಉತ್ತರ ಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಭಾನುವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಿಂದಾಗಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡರು ಹಳ್ಳಿಗಳಿಗೆ ಪ್ರವೇಶ ನೀಡದಂತಾಗಿದೆ. ಭವಿಷ್ಯದಲ್ಲಿ ರೈತರು ಬಿಜೆಪಿ ಮುಖಂಡರಿಗೆ ಮುತ್ತಿಗೆ ಹಾಕಬಹುದು ಎಂದು ಅವರು ಹೇಳಿದರು. 

ಪೆಗಾಸಸ್ ಹಗರಣದಲ್ಲಿ ಸಂಸತ್ ಕಲಾಪಕ್ಕೆ ಅಡ್ಡಿ ಕುರಿತಂತೆ ಮಾತನಾಡಿದ ಸಿಂಗ್, ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಗಣಿಸಬೇಕು, ಒಂದು ವೇಳೆ ವಿಪಕ್ಷಗಳು ತನಿಖೆಗೆ ಬಯಸಿದರೆ, ಸರ್ಕಾರದ ಅದನ್ನು ಮಾಡಲು ಮುಂದಾಗಬೇಕು, ಸಂಸತ್ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.

SCROLL FOR NEXT