ಸಂಗ್ರಹ ಚಿತ್ರ 
ದೇಶ

ಟಾಪರ್ ಐಎಎಸ್ ದಂಪತಿ ವಿಚ್ಛೇದನ

ದೇಶದ ಟಾಪರ್ ಐಎಎಸ್ ದಂಪತಿಯಾದ ಟೀನಾ ದಾಬಿ ಮತ್ತು ಅತರ್ ಆಮೀರ್ ಖಾನ್ ವಿಚ್ಚೇದನ ಪಡೆದಿದ್ದಾರೆ. 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಟೀನಾ ದಾಬಿ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದರು.

ನವದೆಹಲಿ: ದೇಶದ ಟಾಪರ್ ಐಎಎಸ್ ದಂಪತಿಯಾದ ಟೀನಾ ದಾಬಿ ಮತ್ತು ಅತರ್ ಆಮೀರ್ ಖಾನ್ ವಿಚ್ಚೇದನ ಪಡೆದಿದ್ದಾರೆ. 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಟೀನಾ ದಾಬಿ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದರು. ಅದೇ ವರ್ಷ ಅತರ್ ಖಾನ್ ಎರಡನೇ ಸ್ಥಾನ ಪಡೆದಿದ್ದರು ಎನ್ನುವುದು ವಿಶೇಷ. ಅಲ್ಲಿಂದಲೇ ಅವರಿಬ್ಬರ ಪ್ರಣಯ ಶುರುವಾಗಿತ್ತು.

ಮುಂದೆ 2018ರಲ್ಲಿ ಅವರಿಬ್ಬರೂ ವಿವಾಹವಾಗಿದ್ದರು. ಮದುವೆಗೆ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಅವರಿಬ್ಬರದು ಅಂತರ್ಜಾತೀಯ ವಿವಾಹವಾಗಿದ್ದರಿಂದ ಮದುವೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲವ್ ಜಿಹಾದ್ ಕೂಗು ಎದ್ದಿತ್ತು.

ಐಎಎಸ್ ದಂಪತಿ ಕಳೆದ ವರ್ಷ ನವೆಂಬರ್ ನಲ್ಲಿಯೇ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಟೀನಾ ದಾಬಿ ಮತ್ತು ಅತರ್ ಆಮೀರ್ ಖಾನ್ ಇಬ್ಬರೂ ರಾಜಸ್ಥಾನದ ಜೈಪುರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಅತರ್ ಖಾನ್ ಅವರನ್ನು ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT