ಮನೀಶ್ ಮಹೇಶ್ವರಿ 
ದೇಶ

ಭಾರತದ ಟ್ವೀಟರ್ ಮುಖ್ಯಸ್ಥ ಮನೀಶ್ ಮಹೇಶ್ವರಿಯನ್ನು ದೇಶದಿಂದ ಹೊರಕ್ಕೆ ವರ್ಗಾವಣೆ!

ಕೇಂದ್ರ ಸರ್ಕಾರದ ಜೊತೆಗೆ ಹಗ್ಗಜಗ್ಗಾಟ. ಅಲ್ಲದೆ ಕಾಂಗ್ರೆಸ್ ಮತ್ತು ಮುಖಂಡರ ಖಾತೆಗಳು ಬ್ಯಾನ್ ವಿವಾದ ನಡುವೆ ಟ್ವೀಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ದೇಶದಿಂದ ಹೊರಕ್ಕೆ ವರ್ಗಾವಣೆ ಮಾಡಲಾಗಿದೆ. 

ನವದೆಹಲಿ: ಕೇಂದ್ರ ಸರ್ಕಾರದ ಜೊತೆಗೆ ಹಗ್ಗಜಗ್ಗಾಟ. ಅಲ್ಲದೆ ಕಾಂಗ್ರೆಸ್ ಮತ್ತು ಮುಖಂಡರ ಖಾತೆಗಳು ಬ್ಯಾನ್ ವಿವಾದ ನಡುವೆ ಟ್ವೀಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ದೇಶದಿಂದ ಹೊರಕ್ಕೆ ವರ್ಗಾವಣೆ ಮಾಡಲಾಗಿದೆ. 

ಟ್ವೀಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮನೀಶ್ ಮಹೇಶ್ವರಿಗೆ ಇದೀಗ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಕಂದಾಯ ಕಾರ್ಯತಂತ್ರ ವಿಭಾಗದ ಹಿರಿಯ ನಿರ್ದೇಶಕನ ಹುದ್ದೆ ನೀಡಿದೆ. 

ಹೊಸ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಿರುವ ಕಂದಾಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಹಿರಿಯ ನಿರ್ದೇಶಕರ ಪಾತ್ರದಲ್ಲಿ ಮನೀಶ್ ಮಹೇಶ್ವರಿ ಅಮೆರಿಕಗೆ ತೆರಳುತ್ತಿದ್ದಾರೆ. ಮನೀಶ್ ಟ್ವೀಟರ್ ನಲ್ಲಿ ಗ್ಲೋಬಲ್ ಸ್ಟ್ರಾಟಜಿ ಮತ್ತು ಆಪೇರಷನ್ಸ್ ನ ಹಿರಿಯ ನಿರ್ದೇಶಕಾರದ ಡಯೆಟ್ರಾ ಮರಾ ಅವರಿಗೆ ವರದಿ ಮಾಡಲಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಕಳೆದ ಎರಡು ವರ್ಷಗಳಲ್ಲಿ ಭಾರತೀಯ ವ್ಯವಹಾರದ ನಿಮ್ಮ ನಾಯಕತ್ವಕ್ಕಾಗಿ ಮನೀಶ್ ಮಹೇಶ್ವರಿ ಅವರಿಗೆ ಧನ್ಯವಾದಗಳು. ಜಗತ್ತಿನಾದ್ಯಂತ ಹೊಸ ಮಾರುಕಟ್ಟೆಗೆ ಕಂದಾಯ ತಂತ್ರ ಮತ್ತು ಕಾರ್ಯಾಚರಣೆಗಳ ಉಸ್ತುವಾರಿಯಲ್ಲಿ ನಿಮ್ಮ ಹೊಸ ಅಮೆರಿಕ ಮೂಲದ ಜವಾಬ್ದಾರಿಗೆ ಅಭಿನಂದನೆಗಳು ಎಂದು ಟ್ವೀಟರ್ ಜಪಾನ್ ಉಪಾಧ್ಯಕ್ಷ ಯು ಸಸಮೊಟೊ ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

SCROLL FOR NEXT